

ತಿ.ನರಸೀಪುರ: ತಾಲೂಕಿನ ಸೋಮನಾಥಪುರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ಸೋಮವಾರ 6 ಮಂದಿ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾದರು.
ಪರಿಶಿಷ್ಟ ಪಂಗಡ ಮೀಸಲು ಸ್ಥಾನಕ್ಕೆ ಶ್ರೀರಂಗರಾಜಪುರ ಎಂ.ಸಿದ್ದರಾಜು, ಹಿಂದುಳಿದ ವರ್ಗ ಬಿ ಮೀಸಲು ಸ್ಥಾನಕ್ಕೆ ಮಾಜಿ ಅಧ್ಯಕ್ಷ ಆರ್‌ಟಿಒ ಬಿ.ಶಿವಣ್ಣ, ಹಿಂದುಳಿದ ವರ್ಗ ಎ ಮಹಿಳೆಗೆ ಮೀಸಲಾದ ಸ್ಥಾನಕ್ಕೆ ಮರಮ್ಮ, ಮಹಿಳಾ ಮೀಸಲು ಸ್ಥಾನಕ್ಕೆ ಸುಂದರಮ್ಮ, ಅನಸೂಯಾ ಹಾಗೂ ಪ.ಜಾತಿ ಮೀಸಲು ಸ್ಥಾನಕ್ಕೆ ಸಿ.ನಂಜುಂಡಯ್ಯ ಅವಿರೋಧವಾಗಿ ಆಯ್ಕೆಯಾದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಸ್ಥಾನಕ್ಕೆ ಫೆ.9ರಂದು ಚುನಾವಣೆ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಸೋಮವಾರ ಸಂಜೆಯವರೆಗೂ ಅವಕಾಶವಿದ್ದ ಹಿನ್ನೆಲೆಯಲ್ಲಿ ಹಲವಾರು ಮಂದಿ ತಮ್ಮ ನಾಮಪತ್ರ ವಾಪಸ್ ಪಡೆದ್ದರಿಂದ 6 ಮಂದಿ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾದರು. ಉಳಿದ 6 ನಿರ್ದೇಶಕರ ಆಯ್ಕೆಗಾಗಿ ಸಾಲಗಾರರ ಮತ್ತು ಸಾಲಗಾರರಲ್ಲದ ಕ್ಷೇತ್ರದಿಂದ 10 ಮಂದಿ ಅಭ್ಯರ್ಥಿಗಳು ಚುನಾವಣೆ ಕಣದಲ್ಲಿ ಉಳಿದುಕೊಂಡಿದ್ದಾರೆ.
ಸಾಲಗಾರರಲ್ಲದ ಕ್ಷೇತ್ರದಿಂದ ಉಷಾ ಹಾಗೂ ಎಸ್.ಎ.ಯದುನಂದನ್, ಸಾಲಗಾರರ ಕ್ಷೇತ್ರದಿಂದ ಗಿರೀಶ್ ಗೌಡ, ಕೆ.ಎಂ.ಚಂದ್ರಶೇಖರ್, ಎಸ್.ನಾಗರಾಜು, ಎಂ.ಮಹದೇವು, ಆರ್.ರಂಗಸ್ವಾಮಿ, ರಾಜು, ಲೋಕೇಶ್, ಶಿವ ಶಂಕರಪ್ಪ ನಿರ್ದೇಶಕರ ಆಯ್ಕೆ ಬಯಸಿ ಅಂತಿಮವಾಗಿ ಕಣದಲ್ಲಿದ್ದಾರೆ.
ನಾಮಪತ್ರ ಹಿಂಪಡೆಯುವ ಸಂಧಾನ ಸಭೆಯಲ್ಲಿ ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ವಜ್ರೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ರಾಜಣ್ಣ, ಡಿಸಿಸಿ ಸದಸ್ಯ ಉಕ್ಕಲಗೆರೆ ಬಸವಣ್ಣ, ಗುತ್ತಿಗೆದಾರ ಕೆ.ಎಂ.ಮಧುಕುಮಾರ್, ಗಣೇಶಸ್ವಾಮಿ, ತಾಪಂ ಮಾಜಿ ಸದಸ್ಯ ರಾಮಲಿಂಗಯ್ಯ, ನ್ಯಾಯಬೆಲೆ ಅಂಗಡಿ ನಾಗೇಂದ್ರ, ದಿನೇಶ್, ಶಿವಪ್ಪ, ಮಹದೇವಯ್ಯ, ಬೋರೇಗೌಡ, ಪುಟ್ಟಸ್ವಾಮಿ, ಡೆಲ್ಲಿರಾಮಣ್ಣ, ಕುಳ್ಳ ಮಹದೇವಯ್ಯ, ಷಡಕ್ಷರಿ, ಮಂಜುನಾಥ್ ಇತರರು ಇದ್ದರು.