ಚುನಾವಣೆ ಬಹಿಷ್ಕರಿಸಿದ 6 ಅಭ್ಯರ್ಥಿಗಳು

22AIGALI1.jpg
Published on

ಐಗಳಿ: ಚುನಾವಣಾ ಅಕಾರಿಗಳು ಹಾಗು ಪೊಲೀಸ್ ಸಿಬ್ಬಂದಿ ನ್ಯಾಯಸಮ್ಮತ ಚುನಾವಣೆ ನಡೆಸುತ್ತಿಲ್ಲ ಎಂದು ಆರೋಪಿಸಿ ಐಗಳಿ ಬಸವೇಶ್ವರ ಪಿಕೆಪಿಎಸ್ ಆಡಳಿತ ಮಂಡಳಿ ಚುನಾವಣೆಗೆ ಸ್ಪರ‌್ಸಿದ್ದ 6 ಜನ ಅಭ್ಯರ್ಥಿಗಳು ತಮ್ಮ ಏಜೆಂಟರನ್ನು ವಾಪಸ್ ಕರೆಸಿಕೊಂಡು ಚುನಾವಣೆ ಬಹಿಷ್ಕರಿಸಿದರು.

ಇಲ್ಲಿನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಿಗದಿತ ವೇಳೆಗೆ ಅಕಾರಿಗಳು ಮತದಾನ ಆರಂಭಿಸಲು ಅನುವು ಮಾಡಿಕೊಟ್ಟರೂ ಮಧ್ಯಾಹ್ನ 12ರ ಸುಮಾರಿಗೆ ಎರಡು ಗುಂಪುಗಳ ಮಧ್ಯೆ ವಾಗ್ವಾದ ಪ್ರಾರಂಭವಾಯಿತು.
ಬಿಜೆಪಿ ಯುವ ಮುಖಂಡ ಶಿವಾನಂದ ಸಿಂಧೂರ ಮಾತನಾಡಿ, ಎಲ್ಲ ಅಕಾರಿಗಳು ಸೇರಿ ಏಕಪಕ್ಷೀಯವಾಗಿ ಚುನಾವಣೆ ನಡೆಸುತ್ತಿದ್ದಾರೆ. ಮುಂದಾಗುವ ಎಲ್ಲದಕ್ಕೂ ಅಕಾರಿಗಳೇ ಹೊಣೆಗಾರರು ಎಂದು ಆರೋಪಿಸಿದರು. ತಮ್ಮ ಬೆಂಬಲಿಗರ ಎಜೆಂಟರನ್ನು ವಾಪಸ್ ಕರೆಸಿಕೊಂಡು ಚುನಾವಣಾ ಅಧಿಕಾರಿಗೆ ಚುನಾವಣೆ ಬಹಿಷ್ಕಾರ ಪತ್ರ ನೀಡಿ ಎಲ್ಲರೊಂದಿಗೆ ಹೊರಹೋದರು.

ಐಗಳಿ ಬಸವೇಶ್ವರ ಪಿಕೆಪಿಎಸ್ ಆಡಳಿತ ಮಂಡಳಿ ಚುನಾವಣೆ ಬಹಿಷ್ಕರಿಸಿದ  ಅಭ್ಯರ್ಥಿಗಳು ಶಿವಾನಂದ ಸಿಂಧೂರ, ಶಂಕರಗೌಡ ಪಾಟೀಲ, ಶಿವಲಿಂಗ ಅರಟಾಳ ಇತರರಿದ್ದಾರೆ.
ಐಗಳಿ ಬಸವೇಶ್ವರ ಪಿಕೆಪಿಎಸ್ ಆಡಳಿತ ಮಂಡಳಿ ಚುನಾವಣೆ ಬಹಿಷ್ಕರಿಸಿದ  ಅಭ್ಯರ್ಥಿಗಳು ಶಿವಾನಂದ ಸಿಂಧೂರ, ಶಂಕರಗೌಡ ಪಾಟೀಲ, ಶಿವಲಿಂಗ ಅರಟಾಳ ಇತರರಿದ್ದಾರೆ.

ಅಭ್ಯರ್ಥಿಗಳಾದ ಶಂಕರಗೌಡ ಪಾಟೀಲ, ಶಿವಲಿಂಗ ಅರಟಾಳ, ಜಲಾಲ್ ಮುಜಾವರ, ಅಪ್ಪಾಸಾಬ ರೇವಡಿಗಾರ, ಮಲ್ಲಪ್ಪ ಹಾಲಳ್ಳಿ, ಪ್ರಕಾಶ ಕಾಂಬಳೆ ಮಾತನಾಡಿ, ಇನ್ನೊಂದು ಗುಂಪಿನೊಂದಿಗೆ ಚುನಾವಣಾ ಅಕಾರಿಗಳು ಮತ್ತು ಪೊಲೀಸರು ಶಾಮಿಲಾಗಿ ನಮಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಬಂದೇನಮಾಜ್ ಮುಜಾವರ, ಗ್ರಾಪಂ ಸದಸ್ಯ ಶ್ರೀಶೈಲ ಮಿರ್ಜಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net