ಧಾರವಾಡ ಕ್ಷೇತ್ರದಲ್ಲಿ 6.83 ಲಕ್ಷ ಜನ್​ಧನ್ ಖಾತೆ

New Joshi
Published on

ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ 6.83 ಲಕ್ಷ ಪಿಎಂ ಜನ್​ಧನ್ ಖಾತೆ ತೆರೆದಿದ್ದು, ಮಹಿಳೆಯರಲ್ಲಿಯೇ ಹೆಚ್ಚು ಆರ್ಥಿಕ ಸಾಕ್ಷರತೆ ಮೂಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.

ಪ್ರಧಾನ ಮಂತ್ರಿ ಜನ್​ಧನ್ ಯೋಜನೆಯಡಿ ಕಳೆದೊಂದು ದಶಕದಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 6,83,250 ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಈ ಖಾತೆಗಳಲ್ಲಿ ಒಟ್ಟು 464.54 ಕೋಟಿ ರೂ. ಜಮೆಯಾಗಿದೆ ಎಂದು ತಿಳಿಸಿದ್ದಾರೆ.

ಧಾರವಾಡ ಕ್ಷೇತ್ರದ ಗ್ರಾಮೀಣ ಭಾಗದಲ್ಲಿ 27,4669 ಜನ್ ಧನ್​ಖಾತೆ ತೆರೆದಿದ್ದರೆ, ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ 3,92,327 ಖಾತೆಗಳನ್ನು ತೆರೆಯಲಾಗಿದೆ. ಇದರಲ್ಲಿ ಪುರುಷರಿಗಿಂತ ಮಹಿಳೆಯರಲ್ಲೇ ಹೆಚ್ಚು ಆರ್ಥಿಕ ಸಾಕ್ಷರತೆ, ಸ್ಥಿರತೆ, ಆರ್ಥಿಕ ಭದ್ರತೆ ಕಂಡುಬಂದಿದೆ ಎಂದು ತಿಳಿಸಿದ್ದಾರೆ.

ಧಾರವಾಡ ಕ್ಷೇತ್ರದಲ್ಲಿ 2,73,354 ಪುರುಷರು ಜನ್​ಧನ್ ಖಾತೆ ತೆರೆದಿದ್ದರೆ, 4,09,869 ಮಹಿಳೆಯರು ಜನ್​ಧನ್ ಖಾತೆ ತೆರೆದು ಈ ಯೋಜನೆಯಲ್ಲಿ ಮುಂದಿದ್ದಾರೆ.

4.5 ಲಕ್ಷ ರುಪೇ ಕಾರ್ಡ್: ಪ್ರಧಾನಮಂತ್ರಿ ಜನ್ ಧನ್ ಯೋಜನೆಯಡಿ ಖಾತೆ ತೆರೆದವರಲ್ಲಿ 4,52,099 ಗ್ರಾಹಕರಿಗೆ ರುಪೇ ಕಾರ್ಡ್ ಸಹ ಒದಗಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net