6.58 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

1010
Published on

ಉಳ್ಳಾಗಡ್ಡಿ-ಖಾನಾಪುರ: ಹುಕ್ಕೇರಿ ತಾಲೂಕಿನ ಹೂಸೂರ, ಉಳ್ಳಾಗಡ್ಡಿ ಖಾನಾಪುರ ಗ್ರಾಮಗಳಲ್ಲಿನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಯಮಕನಮರಡಿ ಠಾಣೆ ಪೊಲೀಸರು ಕಳ್ಳನನ್ನು ಬಂಧಿಸಿ 6,58,800 ರೂ. ಮೌಲ್ಯದ ಬಂಗಾರದ ಆಭರಣ ಮತ್ತು 44,800 ರೂ. ಮೊತ್ತದ 640 ಗ್ರಾಂ ಬೆಳ್ಳಿ ಆಭರಣ ವಶಪಡಿಸಿಕೊಂಡಿದ್ದಾರೆ.

ಮಹಾರಾಷ್ಟ್ರದ ಕೊಲ್ಲಾಪುರದ ವಿಶಾಲ ನರಸಿಂಗ್ ಶೇರಖಾನೆ ಬಂಧಿತ ವ್ಯಕ್ತಿ. ಹೊಸೂರ ಗ್ರಾಮದಲ್ಲಿ ಮೇ 29ರಂದು ಮನೆಯ ಬೀಗ ಮುರಿದು 25 ಗ್ರಾಂ ತೂಕದ ಬೆಳ್ಳಿ ಆಭರಣಗಳು ಹಾಗೂ 290 ಗ್ರಾಂ ಬೆಳ್ಳಿ ಆಭರಣ ಸೇರಿ ಒಟ್ಟು 1,16,000 ರೂ. ಮೊತ್ತದ ವಸ್ತು ಮತ್ತು 32,000 ರೂ. ನಗದು ಕಳ್ಳತನವಾಗಿತ್ತು.

ಈ ಕುರಿತು ಜೂ.4ರಂದು ಹೊಸೂರ ಗ್ರಾಮದ ಪಾರೇಶ ಭರಮಾ ಅಕ್ಕತಂಗೇರಹಾಳ ಎಂಬುವವರು ದೂರು ದಾಖಲಿಸಿದ್ದರು. ಕಳ್ಳತನದ ಪ್ರತ್ಯೇಕ ಪ್ರಕರಣಗಳಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net