ಶಿವನಸಮುದ್ರ ಸಮೂಹ ದೇವಾಲಯಗಳ ಹುಂಡಿ ಹಣ ಎಣಿಕೆ

30kgl-7.,,
Published on

ಕೊಳ್ಳೇಗಾಲ: ತಾಲೂಕಿನ ಶಿವನ ಸಮುದ್ರದ ಮಧ್ಯರಂಗನಾಥಸ್ವಾಮಿ ದೇವಸ್ಥಾನದ ಆವರಣದಲ್ಲಿ ಶಿವನಸಮುದ್ರ ಸಮೂಹ ದೇವಾಲಯಗಳ ಹುಂಡಿ ಹಣ ಎಣಿಕೆ ಕಾರ್ಯ ಶನಿವಾರ ನಡೆದಿದ್ದು 6,03,520 ರೂ. ಸಂಗ್ರಹವಾಗಿದೆ.


ಉಪವಿಭಾಗಾಧಿಕಾರಿ ಮಹೇಶ್ ನೇತೃತ್ವದಲ್ಲಿ ಸಮೂಹ ದೇವಾಲಯಗಳಾದ ಮಧ್ಯರಂಗನಾಥಸ್ವಾಮಿ ದೇವಾಲಯ, ಪ್ರಸನ್ನ ಮೀನಾಕ್ಷಿ ದೇವಾಲಯ ಹಾಗೂ ಆದಿಶಕ್ತಿ ಮಾರಮ್ಮ ದೇವಾಲಯಗಳ ಹುಂಡಿಗಳ ಎಣಿಕೆ ನಡೆದಿದ್ದು. 6,03,520 ರೂ. ಸಂಗ್ರಹವಾಗಿದೆ.

2 ಗ್ರಾಂ. ಚಿನ್ನ, ಹಾಗೂ ಅರ್ಧ ಗ್ರಾಂ.ಬೆಳ್ಳಿ ದೊರೆತಿದೆ. ಎಣಿಕೆಯಲ್ಲಿ ಗ್ರೇಡ್-2 ತಹಸೀಲ್ದಾರ್ ರವಿ, ರಾಜಸ್ವ ನೀರಿಕ್ಷಕ ನಿರಂಜನ್, ಗ್ರಾಮಲೆಕ್ಕಿಗ ಅನಿಲ್, ಪ್ರದೀಪ್, ಮಹೇಶ್ವರಿ, ಶ್ರೀಧರ್, ಅರ್ಚಕರಾದ ಶ್ರೀಧರ್, ಮಾಧವನ್, ಚಿಕ್ಕರಾವಳಯ್ಯ, ನಟರಾಜು, ನಾಗರಾಜು ದೀಕ್ಷಿತ್, ಕೋಟಕ್ ಮಹೀಂದ್ರ ಬ್ಯಾಂಕ್ ಸಿಬ್ಬಂದಿ, ದೇವಾಲಯದ ಸಿಬ್ಬಂದಿ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net