6.20 ಲಕ್ಷ ರೂ. ಮೌಲ್ಯದ ಮಾದಕ ವಸ್ತು ನಿಷ್ಕ್ರಿಯ

24Jaggu9
ಸವದತ್ತಿ ತಾಲೂಕಿನ ಹಾರೊಗೊಪ್ಪದಲ್ಲಿ 6,20,970 ರೂ. ಮೌಲ್ಯದ ಮಾದಕ ವಸ್ತುಗಳನ್ನು ಶುಕ್ರವಾರ ಅಧಿಕಾರಿಗಳು ನಿಷ್ಕ್ರಿಯಗೊಳಿಸಿದರು.
Published on

ಬೆಳಗಾವಿ: ನ್ಯಾಯಾಲಯ, ವಾಯುಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿಯೊಂದಿಗೆ ಸವದತ್ತಿ ತಾಲೂಕಿನ ಹಾರೊಗೊಪ್ಪದ ಸರಹದ್ದಿನಲ್ಲಿ 6,20,970 ರೂ. ಮೌಲ್ಯದ ಮಾದಕ ವಸ್ತುಗಳನ್ನು ಅಧಿಕಾರಿಗಳು ಶುಕ್ರವಾರ ನಿಷ್ಕ್ರಿಯಗೊಳಿಸಿದರು. ಬೆಳಗಾವಿ ಪೊಲೀಸ್ ಆಯುಕ್ತರ ಕಚೇರಿ ವ್ಯಾಪ್ತಿಯ 26 ಪ್ರಕರಣಗಳಲ್ಲಿ ಜಪ್ತಿ ಮಾಡಿದ್ದ 29.90 ಕೆ.ಜಿ. ಗಾಂಜಾ, 20 ಗ್ರಾಂ ಪೆನ್ನಿ ಮಾದಕ ವಸ್ತುಗಳನ್ನು ನಿಯಮಾನುಸಾರ ನಿಷ್ಕ್ರಿಯಗೊಳಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net