ಶಿರಗುರ ಕೃಷಿ ಪತ್ತಿನ ಸಂಘಕ್ಕೆ 6.14 ಲಕ್ಷ ರೂ. ಲಾಭ

23blrp1
ಚೀಕನಹಳ್ಳಿಯ ಶಿರಗುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಅಧ್ಯಕ್ಷ ಸಂತೋಷ್ ಉದ್ಘಾಟಿಸಿದರು.ಕೇಶವಮೂರ್ತಿ, ಮಂಜುನಾಥ್, ಸುಕನ್‌ರಾಜ್, ಷಣ್ಮುಖಾಚಾರ್, ಶೇಖರ್, ಮಹೇಂದ್ರ, ಈಶ್ವರ್ ಇತರರು ಇದ್ದರು.
Published on

ಬೇಲೂರು: ಶಿರಗುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ರೈತರ ಅನುಕೂಲಕ್ಕಾಗಿ 2022-23ನೇ ಸಾಲಿನಲ್ಲಿ 3,53,54,000 ರೂ. ಸಾಲ ವಿತರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಸಂತೋಷ್ ಮಾಹಿತಿ ನೀಡಿದರು.

ತಾಲೂಕಿನ ಚೀಕನಹಳ್ಳಿಯಲ್ಲಿರುವ ಶಿರಗುರ ಪ್ರಾಥಾಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಸರ್ವ ಸದಸ್ಯರ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘವು 1961ರಲ್ಲಿ ಪ್ರಾರಂಭವಾಗಿ ಇಂದಿನವರೆಗೂ ಸುದೀರ್ಘ ಹಾಗೂ ಸಾರ್ಥಕ ಸೇವೆ ಸಲ್ಲಿಸುತ್ತಾ ಬಂದಿದೆ. ಈ ಸಾಲಿಗೆ 1,165 ಜನ ಸದಸ್ಯರನ್ನು ಹೊಂದಿದ್ದು, ಇದರಲ್ಲಿ 650 ಜನರು ಪೂರ್ಣ ಷೇರುದಾರಿದ್ದಾರೆ. 2022-23ನೇ ಸಾಲಿನಲ್ಲಿ 2.27 ಕೋಟಿ ರೂ.ಠೇವಣಿ ಸಂಗ್ರಹಿಸಲಾಗಿದೆ. ಇದರಲ್ಲಿ 85 ಲಕ್ಷ ರೂ.ಗಳನ್ನು ಎಚ್‌ಡಿಸಿಸಿ ಬ್ಯಾಂಕಿನಲ್ಲಿ ಎಫ್‌ಡಿ ಇಡಲಾಗಿದೆ. ಇನ್ನುಳಿದ ಹಣವನ್ನು ವ್ಯವಹಾರಕ್ಕೆ ಬಳಸಲಾಗುತ್ತಿದೆ. ಸಂಘವು ಈ ಬಾರಿ 6.70 ಕೋಟಿ ರೂ.ವಹಿವಾಟು ನಡೆಸಿ, 6,14, 811ರೂ. ಲಾಭ ಗಳಿಸಿದೆ ಎಂದು ತಿಳಿಸಿದರು.

ಸಂಘದ ಉಪಾಧ್ಯಕ್ಷ ಸವೀನ್, ನಿರ್ದೇಶಕರಾದ ಕೇಶವಮೂರ್ತಿ, ಮಂಜುನಾಥ್, ಸುಕನ್‌ರಾಜ್, ಷಣ್ಮುಖಾಚಾರ್, ಶೇಖರ್, ಮಹೇಂದ್ರ, ಈಶ್ವರ್, ರುದ್ರಮ್ಮ, ಸರೋಜಾ, ಗಿರಿಜಾ, ದಿನೇಶ್ ಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net