

ಕಬ್ಬೂರ: ಪಟ್ಟಣದ ಚಿಮ್ಮಟ ತೋಟದ ರೈತ ಸಹದೇವ ಗುರಪ್ಪ ಚಿಮ್ಮಟ ಅವರ ಜೋಡೆತ್ತು ಬರೋಬ್ಬರಿ 6.11 ಲಕ್ಷ ರೂ.ಗಳಿಗೆ ಮಾರಾಟವಾಗಿವೆ. ವಿವಿಧೆಡೆ ನಡೆದ ಕೃಷಿ ಮೇಳಗಳಲ್ಲಿ ಪ್ರದರ್ಶನಗೊಂಡಿದ್ದ ಈ ಜೋಡೆತ್ತು ಹಲವು ಪ್ರಶಸ್ತಿ ಪಡೆದಿವೆ. ಮಹಾರಾಷ್ಟ್ರದ ಪುಣೆ ಜಿಲ್ಲೆಯ ರವೀಂದ್ರ ತಾತ್ಯಾ ಕೊಂಡ್ರೆ ಎಂಬುವವರು ಜೋಡೆತ್ತು ಖರೀದಿಸಿದ್ದಾರೆ. ದಾಖಲೆ ಬೆಲೆಗೆ ಜೋಡೆತ್ತು ಮಾರಾಟಗೊಂಡಿದ್ದರಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಎತ್ತುಗಳನ್ನು ಬೀಳ್ಕೊಡಲಾಯಿತು. ಸಹದೇವಪ್ಪ ಚಿಮ್ಮಟ, ರವೀಂದ್ರ ಕೊಂಡ್ರೆ ಇತರರಿದ್ದರು.