

ಹಿರೇಕೆರೂರ: ಶಾಲೆ ಪುನರಾರಂಭಿಸಲು ಪೋಷಕರ ಅಭಿಪ್ರಾಯ ಸಂಗ್ರಹಣೆ ನಿಮಿತ್ತ ಇಲ್ಲಿನ ಶಾಂತಿಧಾಮದ ತರಳಬಾಳು ಸಿ.ಬಿ.ಎಸ್.ಸಿ. ಶಾಲೆಯಲ್ಲಿ ಶುಕ್ರವಾರ ಸಭೆ ಜರುಗಿತು.
ತಾಲೂಕು ವೈದ್ಯಾಧಿಕಾರಿ ಜಡ್.ಆರ್. ಮಕಂದಾರ ಮಾತನಾಡಿ, ಕರೊನಾ ವೈರಸ್ನಿಂದ ರಕ್ಷಿಸಿಕೊಳ್ಳಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಪೋಷಕರಿಗೆ ತಿಳಿ ಹೇಳಿದರು.
ಸಿ.ಆರ್.ಸಿ.ಯ. ನಾಗರಾಜ್ ಕಾಡಪ್ಪನವರ, ಶಿಕ್ಷಣ ಇಲಾಖೆಯ ಪ್ರಚಲಿತ ನಿಯಮಗಳನ್ನು ಪಾಲಕರಿಗೆ ಮನದಟ್ಟು ಮಾಡಿದರು.
1ರಿಂದ 5ನೇ ತರಗತಿವರೆಗೆ ಆನ್ಲೈನ್ ತರಗತಿಗಳು ಬೇಡ. 6ರ ನಂತರದ ತರಗತಿಗಳಿಗೆ ಆನ್ಲೈನ್ ತರಗತಿ ನಡೆಸಿಕೊಟ್ಟರೆ ಅನುಕೂಲ ಎಂದು ಪಾಲಕರು ಅಭಿಪ್ರಾಯ ವ್ಯಕ್ತಪಡಿಸಿದರು.
ಇದಕ್ಕೆ ಸಮ್ಮತಿಸಿದ ಪ್ರಾಚಾರ್ಯ ಸಿ.ಎಚ್. ನಂದಿಹಳ್ಳಿ ಪಾಲಕರ ಸಲಹೆ ಹಾಗೂ ಇಲಾಖೆಯ ನಿಯಮಗಳನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಶಿಕ್ಷಕ ವೀರನಗೌಡ ಲಿಂಗದಹಳ್ಳಿ ನಿರ್ವಹಿಸಿದರು.