ಭಾಷೆ, ಗಡಿ ಮೀರಿದ ಯೋಗಾಕ್ಕೆ ವಿಶ್ವ ಮಾನ್ಯತೆ

yoga_Champion
Published on

ತುಮಕೂರು: ಭಾರತೀಯ ಒಲಂಪಿಕ್​ ಸಂಸ್ಥೆ ಸದಸ್ಯತ್ವ ಪಡೆದಿರುವ ಯೋಗಾಸನ ಭಾರತ್​, ಕರ್ನಾಟಕ ಯೋಗಾಸನ ಸ್ಪೋರ್ಟ್ಸ್​ ಅಸೋಸಿಯೇಷನ್​ ಹಾಗೂ ಎಸ್​ಜಿ ಎಸ್​ ಅಂತಾರಾಷ್ಟ್ರೀಯ ಯೋಗ ಪ್ರತಿಷ್ಠಾನ ವಿದ್ಯಾಲಯ ಸಹಯೋಗದಲ್ಲಿ 5ನೇ ಹಿರಿಯ ರಾಷ್ಟ್ರೀಯ ಯೋಗಾಸನ ಕ್ರೀಡಾ ಚಾಂಪಿಯನ್​ಶಿಪ್​ಗೆ ಚಾಲನೆ ನೀಡಲಾಯಿತು.

ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಆರಂಭವಾದ ಯೋಗಾ ಚಾಂಪಿಯನ್​ಶಿಪ್​ ಡಿ.15ರ ವರೆಗೂ ನಡೆಯಲಿದ್ದು 32 ತಂಡಗಳು ಭಾಗವಹಿಸಿದ್ದ ಮಹಿಳೆಯರು, ಪುರುಷರು ಎರಡು ವಿಭಾಗದ 800ಕ್ಕೂ ಹೆಚ್ಚು ಕ್ರೀಡಾಪಟುಗಳು, 80ಕ್ಕೂ ಹೆಚ್ಚು ತೀರ್ಪುಗಾರರು ಹಾಗೂ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಯೋಗಾಸಂಸ್ಥೆಯ ಅಧಿಕಾರಿಗಳು ಭಾಗವಹಿಸಿದ್ದಾರೆ. 2020ರಲ್ಲಿ ಕೇಂದ್ರ ಸರ್ಕಾರದ ಯೋಗ ಕ್ರೀಡೆ ಎಂದು ಮಾನ್ಯ ಮಾಡಿದ ನಂತರ ಇದುವರೆಗೂ ನಾಲ್ಕು ರಾಷ್ಟ್ರೀಯ ಯೋಗಾಸನ ಸ್ಪರ್ಧೆ ನಡೆದಿದ್ದು ತುಮಕೂರಿನಲ್ಲಿ ಐದನೇ ಕ್ರೀಡಾಕೂಟ ನಡೆಯುತ್ತಿದೆ. ಸ್ಫರ್ಧೆಗಳಿಗೆ ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ಧಲಿಂಗಸ್ವಾಮೀಜಿ ಚಾಲನೆ ನೀಡಿ ಮಾತನಾಡಿ, ಭಾರತ ವಿಶ್ವಕ್ಕೆ ಕೊಟ್ಟ ದೊಡ್ಡ ಕೊಡುಗೆ ಯೋಗ. ಭಾಷೆ, ಗಡಿ ಮೀರಿದ ಯೋಗಕ್ಕೆ ವಿಶ್ವ ಮಾನ್ಯತೆ ದೊರೆತಿದೆ. ಇತರೆ ಕ್ರೀಡೆಗಳಂತೆ ಯೋಗವೂ ದೇಶದ ಎಲ್ಲಾ ರಾಜ್ಯದ ಕ್ರೀಡಾಪಟುಗಳನ್ನು ಒಗ್ಗೂಡಿಸಿ, ನಾವೆಲ್ಲರೂ ಭಾರತೀಯರು ಎಂಬ ಭಾವನೆ ಉಂಟುಮಾಡುತ್ತಿದೆ ಎಂದರು.

ಯೋಗವನ್ನು ಕೇವಲ ಸ್ಪರ್ಧೆಗಾಗಿ ಕಲಿಯುವುದಲ್ಲ, ಇದರಿಂದ ಮನುಷ್ಯನ, ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸಮತೋಲನದಲ್ಲಿ ಇಟ್ಟುಕೊಳ್ಳಲು ಸಾಧ್ಯ.ಇದರಿಂದ ಪ್ರಧಾನಿಯವರ ಪಿಟ್​ ಇಂಡಿಯಾ ಕನಸನ್ನು ನನಸು ಮಾಡಬಹುದು. ಅಲ್ಲದೆ ಬೇರೆ ಸಾಧನೆಗಳಿಗೆ ಪೂರಕವಾಗಿ ಯೋಗ ಕೆಲಸ ಮಾಡುತ್ತದೆ.ಯಾವುದೇ ರೀತಿಯ ಕ್ರೀಡಾ ಚಟುವಟಿಕೆ ಮಾಡುತ್ತಿದ್ದರು,ಯೋಗಾಸನ ಮಾಡಿದರೆ, ತಾನು ಆರಿಸಿಕೊಂಡ ಕ್ಷೇತ್ರದಲ್ಲಿ ಎತ್ತರಕ್ಕೆ ಎರಲು ಸಹಕಾರಿಯಾಗುತ್ತದೆದೇಹವನ್ನು ಆತ್ಮದ ಅರಮನೆಯಾಗಿ ಮಾಡಿಕೊಳ್ಳಲು ಯೋಗದಿಂದ ಸಾಧ್ಯ ಎಂದರು.

ಇಂದು ಸ್ಪರ್ಧೆಯಲ್ಲಿ ಭಾಗಿಯಾಗುತ್ತಿರುವ ಸ್ಪರ್ಧಾಳುಗಳು ಮುಂಬರುವ 2030ರ ಏಷ್ಯನ್​ ಗೇಮ್ಸ್​ ಮತ್ತು 2036ರ ಒಲಂಪಿಕ್​ ಸ್ಪರ್ಧೆಗಳಲ್ಲಿ ದೇಶವನ್ನು ಪ್ರತಿನಿಧಿಸಲು ತಯಾರಾಗುವಂತೆ ಸ್ವಾಮೀಜಿ ಶುಭ ಹಾರೈಸಿದರು.

ಬಂಜಾರ ಗುರುಪೀಠದ ಶ್ರೀಸರ್ದಾರ್​ ಸೇವಾಲಾಲ್​ ಸ್ವಾಮೀಜಿ ಮಾತನಾಡಿ, ವಿವೇಕಾನಂದ ಸಧೃಢ ದೇಹದಲ್ಲಿ ಮಾತ್ರ ಸದೃಢ ಮನಸ್ಸು ಇರಲು ಸಾಧ್ಯ ಎಂಬ ಮಾತನ್ನು ಯೋಗದಿಂದ ಸಕಾರಗೊಳಿಸಲು ಸಾಧ್ಯ.ನಮ್ಮ ಆರೋಗ್ಯ ಮತ್ತು ಆಲೋಚನೆ ಎರಡು ಚನ್ನಾಗಿರಬೇಕೆಂದರೆ ನಾವೊಬ್ಬ ಯೋಗಪಟುವಾಗಬೇಕು. ದೂರದ ಜಮ್ಮು ಕಾಶ್ಮಿರದಿಂದ ಕನ್ಯಾಕುಮಾರಿಯವರೆಗಿನ ಎಲ್ಲಾ ರಾಜ್ಯಗಳ ಯೋಗ ಪಟುಗಳ ಇಲ್ಲಿ ಪಾಲ್ಗೊಂಡಿರುವುದು ಸಂತಸವನ್ನು ಉಂಟು ಮಾಡಿದೆ.ಆರೋಗ್ಯವಂತ, ಬಲಿಷ್ಠ ಭಾರತ ಕಟ್ಟಲು ಇದು ಸಹಕಾರಿಯಾಗಿದೆ. ಇದೊಂದು ಪ್ರದರ್ಶನ ಕಲೆಯಾಗಿಸದೆ ಜೀವನ ಪದ್ದತಿಯಾಗಿ ರೂಪಗೊಳ್ಳಬೇಕೆಂದು ಸಲಹೆ ನೀಡಿದರು.

ಯೋಗಾಸನ ಭಾರತ್​ನ ಪ್ರಧಾನ ಕಾರ್ಯದರ್ಶಿ ಹಾಗೂ ಹರಿಯಾಣ ಯೋಗ ಆಯೋಗದ ಅಧ್ಯಕ್ಷ ಡಾ.ಜೈದೀಪ ಆರ್ಯ ಮಾತನಾಡಿ, ಶಿಸ್ತು ಬದ್ದ ಮತ್ತು ಆರೋಗ್ಯ ವಂತ ಜೀವನಕ್ಕೆ ಯೋಗ ಅತಿ ಅಗತ್ಯವಾಗಿದೆ.ಇಂತಹ ಯೋಗಾಸನ ಕ್ರೀಡೆಗಳಿಗೆ ಮುಂದಿನ ದಿನಗಳಲ್ಲಿ ಕೇಂದ್ರ ಪಠ್ಯಕ್ಕೆ ಒಳಪಡುಸವ ಸಿಬಿಎಸ್ಸಿ ಸಿಲಬಸ್​ ವಿದ್ಯಾರ್ಥಿಗಳು, ಇಂಡಿಯನ್​ ರೈಲ್ವೆ, ಇಂಡಿಯನ್​ ಆರ್ಮಿ ಸೇರಿದಂತೆ ಕೇಂದ್ರ ಸರಕಾರದ ವ್ಯಾಪ್ತಿಗೆ ಬರುವ ವಿವಿಧ ವಿಭಾಗಗಳ ಕ್ರೀಡಾಪಟುಗಳು 2025ರ ಅಕ್ಟೋಬರ್​ ಮತ್ತು ನವೆಂಬರ್​ನಲ್ಲಿ ನಡೆಯಲಿರುವ ಎಷ್ಯಾ ಯೋಗಾಸನ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಮುಂಬರುವ 2030ರ ಎಷ್ಯನ್​ ಗೇಮ್ಸ್​ ಮತ್ತು 2036ರ ಒಲಂಪಿಕ್​ ಗೇಮ್ಸ್​ ನಲ್ಲಿ ಯೋಗಾಸನಕ್ಕೆ ಅವಕಾಶ ದೊರೆತಿದೆ.ಅಲ್ಲಿ ನಮ್ಮ ಭಾರತದ ಕ್ರೀಡಾಪಟುಗಳು ಪದಕ ಗೆಲ್ಲುವಂತಾಗಬೇಕು ಎಂದರು.

ಇಂದಿನಿಂದ ತುಮಕೂರಿನ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಆರಂಭಗೊಂಡಿರುವ ಐದನೇ ರಾಷ್ಟ್ರೀಯ ಹಿರಿಯರ ಯೋಗಾಸನ ಸ್ಪರ್ಧೆಯಲ್ಲಿ ದೇಶದ 29ರಾಜ್ಯಗಳ ಕ್ರೀಡಾಪಟುಗಳ ಜೊತೆಗೆ ಅಲ್​ ಇಂಡಿಯಾ ಪೊಲೀಸ್​ ಸೆಲೆಕ್ಷನ್​ ಬೋರ್ಡ್​ ತಂಡ ಭಾಗವಹಿಸಿದೆ. ಇಲ್ಲಿ ಉತ್ತಮ ಪ್ರದರ್ಶನ ನೀಡುವ ಯೋಗಾಸನ ಪಟುಗಳನ್ನು 2025ರ ಜನವರಿ 28 ರಿಂದ ಫೆಬ್ರವರಿ 14ರ ವರೆಗೆ ನಡೆಯುವ ಎಷ್ಯಾ ಚಾಂಪಿಯನ್​ ಶಿಫ್​ನಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆಯಲಿದ್ದಾರೆ. ಹಾಗಾಗಿ, ಎಲ್ಲಾ ಕ್ರೀಡಾಪಟುಗಳು ಉತ್ತಮ ರೀತಿಯಲ್ಲಿ ಪ್ರದರ್ಶನ ನೀಡುವಂತೆ ಡಾ.ಜೈದೀಪ್​ ಆರ್ಯ ಸಲಹೆ ನೀಡಿದರು.

ಯೋಗಾಸನ ಅಸೊಸಿಯೇಷನ್​ನ ಕಾರ್ಯದರ್ಶಿ ಡಾ.ಎಂ.ನಿರಂಜನಮೂರ್ತಿ, ಮಾಜಿ ಸಚಿವ ಸೊಗಡು ಶಿವಣ್ಣ, ಯೋಗಾಸನ ಭಾರತ್​ ನ ಖಜಾಂಚಿ ರಚಿತ್​ ಕೌಶಿಕ್​, ಜಯಂತಿ, ದಯಾನಿಧಿ, ಅಂತರರಾಷ್ಟ್ರೀಯ ಕಬ್ಬಡಿ ತರಬೇತುದಾರ ಇಸ್ಮಾಯಿಲ್​, ಯುವಜನಸೇವಾ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ರೋಹಿತ್​ ಗಂಗಾಧರ್​, ಕರ್ನಾಟಕ ಯೋಗಾಸನ ಸ್ಪೋರ್ಟ್ಸ್​ ಅಸೊಸಿಯೇಷನ್​ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net