ಎಡನೀರು ಶ್ರೀಗಳ 5ನೇ ಚಾತುರ್ಮಾಸ್ಯ

New Project (6)
Published on

ಕಾಸರಗೋಡು: ಶ್ರೀಮದ್ ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದರ 5ನೇ ಚಾತುರ್ಮಾಸ್ಯ ವ್ರತಾಚರಣೆ ಅಂಗವಾಗಿ ಕಾಸರಗೋಡು ವಲಯ ಸಮಿತಿ ಸಭೆ ಕಾಸರಗೋಡು ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಜರುಗಿತು.

ಉಳಿಯತ್ತಾಯ ವಿಷ್ಣು ಆಸ್ರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ವಲಯ ಸಮಿತಿ ರಚಿಸಲಾಯಿತು. ಚಾತುರ್ಮಾಸ್ಯ ಅಂಗವಾಗಿ ಜುಲೈ 27ರಂದು ಕಾಸರಗೋಡಿನಿಂದ ಹೊರೆಕಾಣಿಕೆ ಸಹಿತ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು. ವಲಯ ಸಮಿತಿ ರಕ್ಷಾಧಿಕಾರಿಯಾಗಿ ಉಳಿಯತ್ತಾಯ ವಿಷ್ಣು ಆಸ್ರ, ಗೌರವಾಧ್ಯಕ್ಷರಾಗಿ ರಾಮ್ ಪ್ರಸಾದ್ ಕಾಸರಗೋಡು, ಅಧ್ಯಕ್ಷರಾಗಿ ಡಾ.ಕೆ.ಎನ್.ವೆಂಕಟ್ರಮಣ ಹೊಳ್ಳ, ಉಪಾಧ್ಯಕ್ಷರಾಗಿ ಅಶೋಕ ನಾಯ್ಕ, ಕಾರ್ಯದರ್ಶಿಯಾಗಿ ಕೆ.ಜಗದೀಶ್ ಕೂಡ್ಲು, ಕೋಶಾಧಿಕಾರಿಯಾಗಿ ಗುರುಪ್ರಸಾದ್ ಕೋಟೆಕಣಿ, ಪ್ರದೀಪ್ ಬೇಕಲ್, ಸೂರ್ಯಕಾಂತಿ, ಶ್ರೀಲತಾ ಆಯ್ಕೆಯಾದರು.

ಡಾ.ಕೆ.ಎನ್.ವೆಂಕಟ್ರಮಣ ಹೊಳ್ಳ ಪ್ರಾಸ್ತಾವಿಕ ಮಾತನಾಡಿದರು. ಕೆ.ಜಗದೀಶ್ ಕೂಡ್ಲು ಸ್ವಾಗತಿಸಿದರು. ಗುರುಪ್ರಸಾದ್ ಕೋಟೆಕಣಿ ಕಾರ್ಯಕ್ರಮ ನಿರೂಪಿಸಿದರು. ಕೆ.ಎನ್.ರಾಮಕೃಷ್ಣ ಹೊಳ್ಳ ವಂದಿಸಿದರು. ಜುಲೈ 10ರಿಂದ ಸೆಪ್ಟೆಂಬರ್ 7ರವರೆಗೆ ಚಾತುರ್ಮಾಸ್ಯ ಸಮಾರಂಭ ಜರುಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net