ಕುಡಿವ ನೀರಿಗಾಗಿ 593 ಕೋಟಿ ರೂ. ವೆಚ್ಚ

CTD 16 Ght-09
Published on

ಚಿತ್ರದುರ್ಗ: ಜಲಜೀವನ್ ಮಿಷನ್ ಯೋಜನೆಯಡಿ ವಿವಿ ಸಾಗರದಿಂದ 183 ಹಳ್ಳಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು 593 ಕೋಟಿ ರೂ. ವೆಚ್ಚ ಮಾಡಲಾಗುತ್ತ್ತಿದೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ತಿಳಿಸಿದರು.

ತಾಲೂಕಿನ ಗೋನೂರು, ಲಕ್ಷ್ಮೀಸಾಗರ, ಹುಲ್ಲೂರು, ಜಾನಕೊಂಡ ಗ್ರಾಪಂ ವ್ಯಾಪ್ತಿಯಲ್ಲಿ ಬಸವ ಮತ್ತು ಅಂಬೇಡ್ಕರ್ ವಸತಿ ಯೋಜನೆಯಡಿ ಫಲಾನುಭವಿಗಳ ಆಯ್ಕೆಗಾಗಿ ಸೋಮವಾರ ಆಯೋಜಿಸಿದ್ದ ಗ್ರಾಮಸಭೆಯಲ್ಲಿ ಮಾತನಾಡಿದರು.

ಬೃಹತ್ ಟ್ಯಾಂಕ್ ನಿರ್ಮಿಸಿ ಕ್ಷೇತ್ರದ ಪ್ರತಿ ಮನೆಗೂ ಕುಡಿಯುವ ನೀರನ್ನು ಒದಗಿಸಲಾಗುವುದು. ಅಲ್ಲದೆ, ಬಲಿಷ್ಠರು ಗ್ರಾಮಸಭೆಯಲ್ಲಿ ಆಯ್ಕೆಯಾಗಿ ಬಡವರಿಗೆ ಅನ್ಯಾಯ ಆಗಬಾರದು ಎಂಬ ಉದ್ದೇಶವಿಟ್ಟುಕೊಂಡು ಖುದ್ದು ನಾನೇ ಅರ್ಹರ ಆಯ್ಕೆಗೆ ಮುಂದಾಗಿದ್ದೇನೆ ಎಂದರು.

ಗೋನೂರು ಗ್ರಾಪಂ ವ್ಯಾಪ್ತಿಯಲ್ಲಿ ಎಸ್ಸಿ 50, ಎಸ್ಟಿ 85, ಲಕ್ಷ್ಮೀಸಾಗರ ಗ್ರಾಪಂನಲ್ಲಿ ಎಸ್ಸಿ 60, ಎಸ್ಟಿ, ಸಾಮಾನ್ಯ ತಲಾ 40, ಹುಲ್ಲೂರು ಗ್ರಾಪಂನಲ್ಲಿ ಎಸ್ಸಿ 70, ಎಸ್ಟಿ 20, ಸಾಮಾನ್ಯ 60, ಜಾನಕೊಂಡ ಗ್ರಾಪಂನಲ್ಲಿ ಎಸ್ಸಿ 50, ಎಸ್ಟಿ 40, ಸಾಮಾನ್ಯ ವರ್ಗದ 20 ಫಲಾನುಭವಿಗಳಿಗೆ ವಸತಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಿದರು.

ವಿವಿಧ ಗ್ರಾಪಂ ಅಧ್ಯಕ್ಷರಾದ ಟಿ.ಗೀತಾ, ಆರ್.ಸಾವಿತ್ರಮ್ಮ, ಚಿಂತಾಮಣಿ, ಚಂದ್ರಮ ್ಮ, ಸದಸ್ಯ ಎ.ಡಿ.ಧನಂಜಯ್, ವಸತಿ ಯೋಜನೆಯ ಲೋಕೇಶ್, ದೇವರಾಜ್ ಇತರರಿದ್ದರು.

ಬಸ್ ಮಾರ್ಗಕ್ಕೆ ಚಾಲನೆ

ತಾಲೂಕಿನ ಗೊಲ್ಲನಕಟ್ಟೆ ಗ್ರಾಮದಲ್ಲಿ ಸೋಮವಾರ ಕೆಎಸ್‌ಆರ್‌ಟಿಸಿ ಬಸ್ ಮಾರ್ಗಕ್ಕೆ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಚಾಲನೆ ನೀಡಿದರು. ಗ್ರಾಪಂ ಸದಸ್ಯರಾದ ಅಮೃತಾ, ತಿಮ್ಮಣ್ಣ, ಶಿವಮೂರ್ತಿ, ಶಿವಣ್ಣ ಇತರರಿದ್ದರು. ಈ ಮಾರ್ಗದಲ್ಲಿ ಬಸ್ ಸಂಚಾರದಿಂದ ಗೊಲ್ಲನಕಟ್ಟೆ, ಪಲ್ಲವ್ವಗೆರೆ, ಜೆ.ಎನ್.ಕೋಟೆ, ಕಾಸವನಹಳ್ಳಿ, ಕಳ್ಳಿರೊಪ್ಪ, ದೊಡ್ಡಸಿದ್ದವ್ವನಹಳ್ಳಿ, ಬಂಗೇರಹಟ್ಟಿ, ಕುಂಚಿಗನಾಳ್ ಗ್ರಾಮದವರಿಗೆ ಅನುಕೂಲವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net