

ಶೃಂಗೇರಿ: ಜೆಸಿಬಿಎಂ ಕಾಲೇಜಿನ ದ್ವಿತೀಯ ಪದವಿ ಪೂರ್ವ ವಾಣಿಜ್ಯ ವಿಭಾಗದ ಕೆ.ಜಿ.ಇಂಚರಾ ಮಾರ್ಚ್‌ನಲ್ಲಿ ನಡೆದ ಪರೀಕ್ಷೆಯ ಮರುಮೌಲ್ಯ ಮಾಪನದಲ್ಲಿ ರಾಜ್ಯಕ್ಕೆ ಐದನೇ ಸ್ಥಾನ, ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.
600ಕ್ಕೆ 591 ಅಂಕ ಗಳಿಸಿದ್ದಾಳೆ. ಶೇ.98.5 ಫಲಿತಾಂಶ ಪಡೆದಿದ್ದ ಈಕೆ, ಮರು ಮೌಲ್ಯಮಾಪನದಲ್ಲಿ ಆಂಗ್ಲ ಭಾಷೆಯಲ್ಲಿ 93, ಸಂಸ್ಕೃತ 100, ಅರ್ಥಶಾಸ 100, ವ್ಯವಹಾರ ಅಧ್ಯಯನ 99, ಲೆಕ್ಕಶಾಸ 99, ಗಣಕ ಶಾಸ 100 ಅಂಕಗಳನ್ನು ಗಳಿಸಿದ್ದಾಳೆ. ಐಶ್ವರ್ಯಾ ಎಸ್. ರಾವ್ ವಿಜ್ಞಾನ ವಿಭಾಗದಲ್ಲಿ 600ಕ್ಕೆ 583 ಅಂಕ ಪಡೆದು ತಾಲೂಕಿಗೆ ದ್ವಿತೀಯ ಹಾಗೂ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ವಿದ್ಯಾರ್ಥಿಗಳ ಸಾಧನೆಯನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಚಾರ್ಯರು ಮತ್ತು ಸಿಬ್ಬಂದಿ ಶ್ಲಾಘಿಸಿದ್ದಾರೆ.