ಪತ್ರಿಕೆ ಹಾಕುವ ವಿದ್ಯಾರ್ಥಿಗೆ 582 ಅಂಕ

Gagan Banakar
Published on

ರಾಣೆಬೆನ್ನೂರ: ಪತ್ರಿಕೆ ಹಾಕುತ್ತ ವಿದ್ಯಾಭ್ಯಾಸ ಮಾಡಿದ ಬಡ ರೈತನ ಪುತ್ರ ಪಿಯು ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ 582 ಅಂಕಗಳಿಸುವ ಮೂಲಕ ಸಾಧನೆ ಮಾಡಿದ್ದಾನೆ. ತಾಲೂಕಿನ ಚಳಗೇರಿ ಗ್ರಾಮದ ಹಾಗೂ ದಾವಣಗೆರೆ ಸಪ್ತಗಿರಿ ಪಿಯು ಕಾಲೇಜ್‌ನ ಗಗನ ಬಣಕಾರ ವಿಶೇಷ ಸಾಧನೆ ಮಾಡಿರುವ ವಿದ್ಯಾರ್ಥಿ.

ಈತ ಪಿಯುಸಿ ಪರೀಕ್ಷೆಯಲ್ಲಿ ಕನ್ನಡ ವಿಷಯಕ್ಕೆ 99, ಇಂಗ್ಲಿಷ್‌ನಲ್ಲಿ 92, ಭೌತಶಾಸ 96, ರಾಸಾಯನಶಾಸ 96, ಗಣಿತಶಾಸ 99, ಜೀವಶಾಸ 100 ಅಂಕ ಸೇರಿ ಒಟ್ಟು 582 ಅಂಕ ಗಳಿಸಿದ್ದಾನೆ. ಗಗನ ನಿತ್ಯವೂ ಗ್ರಾಮದಲ್ಲಿ ಬೆಳಗ್ಗೆ ಪತ್ರಿಕೆ ಹಾಕಿ ನಂತರ ಕಾಲೇಜ್‌ಗೆ ಹೋಗುತ್ತಿದ್ದ. ತಂದೆ ಕೃಷಿ ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ.

ಟ್ಯೂಷನ್‌ಗೆ ಹೋಗದೆ ಕಾಲೇಜ್‌ನಲ್ಲಿ ಹೇಳಿದ ಪಾಠ ಹಾಗೂ ಶಿಕ್ಷಕರ ಮಾರ್ಗದರ್ಶನದಲ್ಲಿ ಅಧ್ಯಯನ ಮಾಡಿದ ಲವಾಗಿ ಉತ್ತಮ ಅಂಕಗಳಿಸಲು ಸಾಧ್ಯವಾಗಿದೆ ಎಂದು ಗಗನ ‘ವಿಜಯವಾಣಿ’ಯೊಂದಿಗೆ ಅಭಿಪ್ರಾಯ ಹಂಚಿಕೊಡಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net