ಕಾಡಾನೆ ರಕ್ಷಣೆಗೆ 581 ಕಿ.ಮೀ. ಪಾದಯಾತ್ರೆ!

Elephant
ಕಾಸರಗೋಡು ಜಿಲ್ಲೆಯ ಮಂಜೇಶ್ವರದಿಂದ ಪಾದಯಾತ್ರೆ ಆರಂಭಿಸಿದ ರವೇದ್ ಬಾಬು.
Published on

ಮಂಜೇಶ್ವರ (ಕಾಸರಗೋಡು): ಕೇರಳದಲ್ಲಿ ಜನವಸತಿ ಪ್ರದೇಶದಲ್ಲಿ ಇತ್ತೀಚೆಗೆ ಸೆರೆಹಿಡಿಯಲಾಗಿದ್ದ ಒಂಟಿ ಸಲಗದ ಪರ ಯುವಕನೊಬ್ಬ ಬುಧವಾರ ಪಾದಯಾತ್ರೆ ಆರಂಭಿಸಿ ಗಮನ ಸೆಳೆದಿದ್ದಾನೆ. ಕೇರಳದ ತುತ್ತತುದಿ ಮಂಜೇಶ್ವರದಿಂದ ನಡಿಗೆ ಆರಂಭಿಸಿರುವ ತ್ರಿಶೂರ್ ಜಿಲ್ಲೆಯ ವರಂತರಪಲ್ಲಿ ನಿವಾಸಿ ರೇವದ್ ಬಾಬು, ರಾಜಧಾನಿಗೆ ತಲುಪಲು ಒಟ್ಟು 581 ಕಿ.ಮೀ.ನಡೆಯುವ ಸಂಕಲ್ಪ ತೊಟ್ಟಿದ್ದಾನೆ.

ಕಾಡಾನೆ ಜನರಿಗೆ ಹಾನಿ ಮಾಡುವುದಿಲ್ಲ, ಅರಣ್ಯ ನಾಶಕ್ಕೆ ಜನರೇ ಕಾರಣ, ಆಹಾರ ಸಿಗದ ಕಾರಣ ಆನೆ ನಾಡಿಗೆ ಬರುತ್ತದೆ. ಆನೆಗಳನ್ನು ಸ್ವಚ್ಛಂದವಾಗಿ ಕಾಡಿನಲ್ಲೇ ಇರಲು ಬಿಡಿ ಎಂಬ ಘೋಷಣೆಯೊಂದಿಗೆ ಬಾಬು ಏಕಾಂಗಿ ಪಯಣ ಆರಂಭಿಸಿದ್ದಾರೆ. ಕೇರಳದ ಅರಣ್ಯ ಇಲಾಖೆ ಸೆರೆಹಿಡಿದ ಕಾಡಾನೆಯನ್ನು ಮತ್ತೆ ಚಿನ್ನಕನಾಲ್‌ಗೆ ಬಿಡಬೇಕು ಎಂಬುದು ಈತನ ಬೇಡಿಕೆ. ಕೇರಳಿಗರು ಆನೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕು. ಆನೆ ಚಿನ್ನಕನಾಲ್ ಅಥವಾ ಇಡುಕ್ಕಿಯಲ್ಲಿ ಜನರ ಮೇಲೆ ದಾಳಿ ಮಾಡಿಲ್ಲ. ದಾಳಿ ಸಾಧ್ಯತೆ ಹಿನ್ನೆಲೆಯಲ್ಲಿ ಆನೆಯನ್ನು ಸೆರೆಹಿಡಿದದ್ದು ಸರಿಯಲ್ಲ ಎಂಬುದು ಈತನ ವಾದ. ತಿರುವನಂತಪುರಂಗೆ ತೆರಳಿ, ಅರಣ್ಯ ಸಚಿವ ಎ.ಕೆ.ಶಶೀಂದ್ರನ್ ಅವರನ್ನು ಭೇಟಿ ಮಾಡಿ, ಮನವಿ ನೀಡುವುದು ತನ್ನ ಉದ್ದೇಶ ಎಂದು ಬಾಬು ಸುದ್ದಿಗಾರರಿಗೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net