58 ಮಾವಿನಗಿಡಗಳು ಬೆಂಕಿಗಾಹುತಿ

Mango tree
Published on

ಮುಂಡಗೋಡ: ಕಿಡಿಗೇಡಿಗಳು ಹಚ್ಚಿದ ಬೆಂಕಿಯಿಂದಾಗಿ ಹೂ ಬಿಟ್ಟಿದ್ದ 58 ಮಾವಿನ ಗಿಡಗಳು ಸುಟ್ಟ ಘಟನೆ ತಾಲೂಕಿನ ಚವಡಳ್ಳಿ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ.

ಚವಡಳ್ಳಿ ಗ್ರಾಮದ ಯಲ್ಲಪ್ಪ ಹರಿಜನ ಮತ್ತು ಜ್ಯೋತಿ ಮಾನಪ್ಪನವರ ಎಂಬುವರ ಮಾವಿನ ತೋಟ ಹಾನಿಗೀಡಾಗಿದೆ. ಸರ್ವೇ ನಂ 67 ಹಾಗೂ 6/1ರ ಹತ್ತಿರ ತ್ಯಾಜ್ಯದ ರಾಶಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಹೋಗಿದ್ದಾರೆ. ಬೆಂಕಿ ಮಾವಿನ ತೋಟಕ್ಕೆ ವ್ಯಾಪಿಸಿದೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ಪ್ರಭಾರ ಅಗ್ನಿಶಾಮಕ ಠಾಣಾಧಿಕಾರಿ ರಾಜೇಶ ರಾಣೆ, ಸಿಬ್ಬಂದಿಗಳಾದ ಬಸವರಾಜ ನಾಣಾಪುರ, ಅಡವೆಪ್ಪ ಕುರುವಿನಕೊಪ್ಪ, ಚಮನಸಾಬ ನದಾಫ್, ರಾಹುಲ್ ಚಿದ್ದಿಮನಿ,ದುರ್ಗಪ್ಪ ಹರಿಜನ, ರಾಹುಲ್ ಜಿಡ್ಡಿಮನಿ, ವಿಜಯ ಅಮ್ಮಣಗಿ ಕಾರ್ಯಾಚರಣೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net