

ಹಾಸನ : ನಗರದ ಗಾಂಧಿ ಬಜಾರ್ ದೇವಿಗೆರೆ ವೃತ್ತದಲ್ಲಿರುವು ನೀರು ಬಾಗಿಲು ಆಂಜನೇಯ ಸ್ವಾಮಿ ದೇವಾಲಯದಲ್ಲಿ 56ನೇ ವರ್ಷದ ಹನುಮ ಜಯಂತಿ ಮಹೋತ್ಸವವನ್ನು ಸೋಮವಾರ ಅದ್ದೂರಿಯಾಗಿ ಆಚರಿಸಲಾಯಿತು.
ಭಾನುವಾರ ಬೆಳ್ಳಿಗೆ 5 ಗಂಟೆಯಿಂದಲೇ ಆಂಜನೇಯ ಸ್ವಾಮಿ ದೇವರಿಗೆ ಪಂಚಾಮೃತ ಅಭಿಷೇಕ ಮತ್ತು ಪವಮಾನ ಅಭಿಷೇಕವನ್ನು ಮಾಡಲಾಯಿತು. 8:30ಕ್ಕೆ ಸಾಮೂಹಿಕ ಪ್ರಾರ್ಥನೆ, ಮಹಾಗಣಪತಿ ಹೋಮ ,ಲಕ್ಷ್ಮೀ ಲಕ್ಷ್ಮೀನಾರಾಯಣ ಹೃದಯ ಹೋಮ, ಹಮ್ಮಿಕೊಳ್ಳಲಾಗಿದ್ದು ನೂರಾರು ಭಕ್ತಾಧಿಗಳು ಹೋಮದಲ್ಲಿ ಪಾಲ್ಗೊಂಡು ಪೂರ್ಣಹುತಿ ಅದ್ಯುಕ್ತವಾಗಿ ನೆರವೇರಿತು .
ಮೊದಲ ದಿನವಾದ ಇಂದು ದೇವರ ದರ್ಶನಕ್ಕೆ ನೂರಾರು ಭಕ್ತಾಧಿಗಳು ಸರದಿ ಸಾಲಿನಲ್ಲಿ ನೀಂತು ದೇವರಿಗೆ ಬೆಣ್ಣೆಯ ವಿಶೇಷ ಅಲಂಕಾರ ಮಾಡಿ, ಮಹಾಮಂಗಳಾರಾತಿಯನ್ನು ನೆರವೇರಿಸಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ಈ ವೇಳೆ ನೂರಾರು ಭಕ್ತಾಧಿಗಳು ಸರದಿ ಸಾಲಿನಲ್ಲಿ ಆಗಮಿಸಿ ದೇವರ ದರ್ಶನ ಪಡೆದು ಪ್ರಸಾದ ವಿನಿಯೋಗ ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾದರು.
ದೇವರ ದರ್ಶನಕ್ಕೆ ಆಗಮಿಸದಿದ್ದ ನೂರಾರು ಭಕ್ತಾಧಿಗಳಿಗೆ ದೇವಾಲಯ ಭಕ್ತ ಮಂಡಳಿ ಹಾಗೂ ಆಡಳಿತ ಮಂಡಳಿಯಿಂದ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿದ್ದು, ಭಾಕ್ತಾಧಿಗಳು ಸರದಿ ಸಾಲಿನಲ್ಲಿ ನಿಂತು ಅನ್ನಸಂತರ್ಪಣೆಯನ್ನು ಸ್ವೀಕರಿಸಿದರು. ದೇವರ ದರ್ಶನಕ್ಕೆ ಮಾಜಿ ಶಾಸಕ ಪ್ರಕಾಶ್ ಅವರ ಕುಟುಂಬ, ಹಾಗೂ ಶಾಸಕ ಪ್ರೀತಂಗೌಡರ ತಾಯಿ ಆಗಮಿಸಿ ದೇವರ ಕೃಪೆಗೆ ಪಾತ್ರರಾದರು.
ಭಕ್ತಾಧಿಗಳಿಗೆ ತೊಂದರೆಯಾಗದಂತೆ ಬ್ಯಾರಿಗೇಟ್‌ಗಳನ್ನು ನಿರ್ಮಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಸಿಬ್ಬಂದಿಗಳನ್ನು ನೇಮಿಸಲಾಗಿತ್ತು,