ಕೊಡಗು ಜಿಲ್ಲಾ ಸಹಕಾರ ಯೂನಿಯನ್‌ನ ೫೬ನೇ ವಾರ್ಷಿಕ ಮಹಾಸಭೆ

sahakara union
Published on

ಮಡಿಕೇರಿ: ಸಹಕಾರ ಸಂಘಗಳ ಸದಸ್ಯರು ಸಕ್ರಿಯವಾಗಿ ವಾರ್ಷಿಕ ಮಹಾಸಭೆಯಲ್ಲಿ ಪಾಲ್ಗೊಂಡಲ್ಲಿ ಮಾತ್ರ ಚುನಾವಣೆ ಹಕ್ಕು ಹಾಗೂ ಸದಸ್ಯತ್ವ ಅರ್ಹತೆಗಳು ಮುಂದುವರೆಯುತ್ತವೆ ಎಂದು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎ.ಕೆ.ಮನು ಮುತ್ತಪ್ಪ ತಿಳಿಸಿದರು.


ಯೂನಿಯನ್ ಸಭಾಂಗಣದಲ್ಲಿ ನಡೆದ ಕೊಡಗು ಜಿಲ್ಲಾ ಸಹಕಾರ ಯೂನಿಯನ್‌ನ ೨೦೨೨-೨೩ನೇ ಸಾಲಿನ ಹಾಗೂ ೫೬ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಸಹಕಾರ ಸಂಘಗಳ ಸದಸ್ಯರು ಸಕ್ರೀಯವಾಗಿ ಸಂಘದ ಕಾರ್ಯ ಚಟುವಟಿಕೆಗಳಲ್ಲಿ, ವಿಶೇಷವಾಗಿ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಬೇಕು. ಆಗ ಮಾನದಂಡಗಳಿಗೆ ಅನುಸಾರವಾಗಿ ಚುನಾವಣೆ ಹಕ್ಕು ಹಾಗೂ ಸದಸ್ಯತ್ವ ಅರ್ಹತೆಗಳು ಮುಂದುವರೆಯುತ್ತವೆ. ಯೂನಿಯನ್ ಪ್ರಮುಖ ಉದ್ದೇಶವಾದ ಶಿಕ್ಷಣ, ತರಬೇತಿ, ಪ್ರಚಾರ ಕಾರ್ಯಕ್ರಮಗಳಲ್ಲಿ ಸದಸ್ಯ ಸಂಘಗಳ ಪ್ರತಿನಿಧಿಗಳು ಕಡ್ಡಾಯವಾಗಿ ಹಾಜರಾಗಿ ಮಾಹಿತಿಯನ್ನು ಸದಸ್ಯರಿಗೆ ತಲುಪುವ ಕೆಲಸ ಮಾಡಬೇಕು. ಸದಸ್ಯ ಸಂಘಗಳ ಕೋರಿಕೆ ಅನ್ವಯ ಸಹಕಾರ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ರೀತಿಯ ತರಬೇತಿ, ಕಾರ್ಯಾಗಾರ ಹಮ್ಮಿಕೊಂಡು ಸಂಘಗಳ ಅಭಿವೃದ್ಧಿಗೆ ಪೂರಕವಾಗುವ ನಿಟ್ಟಿನಲ್ಲಿ ಪ್ರಯತ್ನಿಸಬಹುದಾಗಿದೆ ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ಕೊಡಗು ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. ಕಾಫಿಗೆ ಉಚಿತ ೧೦ ಎಚ್.ಪಿ. ಉಚಿತ ವಿದ್ಯುತ್ ಪೂರೈಸಬೇಕೆಂದು ಸರ್ಕಾರವನ್ನು ಕೋರುವಂತೆ ಈ ಸಂದರ್ಭದಲ್ಲಿ ನಿರ್ಣಯಿಸಲಾಯಿತು.


ವೇದಿಕೆಯಲ್ಲಿ ಉಪಾಧ್ಯಕ್ಷ ಪಿ.ಸಿ.ಮನು ರಾಮಚಂದ್ರ, ನಿರ್ದೇಶಕರಾದ ಬಿ.ಎ.ರಮೇಶ್ ಚಂಗಪ್ಪ, ಎನ್.ಎ.ರವಿಬಸಪ್ಪ, ಪ್ರೇಮ ಸೋಮಯ್ಯ, ಸಿ.ಎಸ್.ಕೃಷ್ಣ ಗಣಪತಿ, ಕನ್ನಂಡ ಸಂಪತ್, ಪಿ.ವಿ.ಭರತ್, ಸಹಕಾರ ಸಂಘಗಳ ಉಪನಿಬಂಧಕ ಕೃಷ್ಣ ಪ್ರಸಾದ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net