ಅಖಂಡ ಜಿಲ್ಲೆಗೆ 565 ಕೋಟಿ ರೂ. ಮನವಿ

Published on

ಬಳ್ಳಾರಿ : ಈ ಬಾರಿ ಮಂಡಿಸಲಿರುವ ಬಜೆಟ್‌ನಲ್ಲಿ ವಿಜಯನಗರಕ್ಕೆ 150 ಕೋಟಿ ರೂ. ಹಾಗೂ ಬಳ್ಳಾರಿಗೆ 415 ಕೋಟಿ ರೂ. ವಿಶೇಷ ಅನುದಾನ ಕೋರಿ ಎರಡೂ ಜಿಲ್ಲೆಗಳ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಸಿಎಂ ಸಿದ್ದರಾಮಯ್ಯ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಬಜೆಟ್ ಪೂರ್ವಬಾವಿ ಸಭೆಯಲ್ಲಿ ನೂತನ ಜಿಲ್ಲೆ ವಿಜಯನಗರದ ಜಿಲ್ಲಾಡಳಿತ ಭವನಕ್ಕೆ 100 ಕೋಟಿ ರೂ., ಹಂಪಿಯಲ್ಲಿ ಗಣ್ಯರ ವಾಸಕ್ಕೆ ಪ್ರವಾಸಿ ಮಂದಿರ ನಿರ್ಮಾಣಕ್ಕೆ 10 ಕೋಟಿ ರೂ. ಹಾಗೂ ಹೊಸಪೇಟೆಯಲ್ಲಿ 250 ಹಾಸಿಗೆ ಆಸ್ಪತ್ರೆಗೆ ವೈದ್ಯಕೀಯ ಉಪಕರಣ, ಮೂಲ ಸೌಕರ್ಯಕ್ಕೆ 40 ಕೋಟಿ ರೂ. ಒದಗಿಸಲು ಮನವಿ ಮಾಡಲಾಗಿದೆ.

ಅದೇ ರೀತಿ ಬಳ್ಳಾರಿಯಲ್ಲಿ ಕುರುಗೋಡು ತಾಲೂಕು ಬೈಲೂರು ಗ್ರಾಮದಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ನಿರ್ಮಾಣಕ್ಕೆ 100 ಕೋಟಿ ರೂ., ಕಂಪ್ಲಿ ತಾಲೂಕು ಮತ್ತು ಕೊಪ್ಪಳದ ಗಂಗಾವತಿ ನಡುವೆ ತುಂಗಭದ್ರಾ ಸೇತುವೆ ನಿರ್ಮಾಣ ಕ್ಕೆ 80 ಕೋಟಿ ರೂ., ಕಂಪ್ಲಿ ತಾಲೂಕಿನಲ್ಲಿ ಜಿಲ್ಲಾ ಕೃಷಿ ತರಬೇತಿ ಕೇಂದ್ರ ಹಾಗೂ ಬೀಜ ಉತ್ಪಾದನಾ ಸಂಶೋಧನೆ ಕೇಂದ್ರಕ್ಕೆ 100 ಕೋಟಿ ರೂ., ಸಿರಗುಪ್ಪ ತಾಲೂಕಿನಲ್ಲಿ ಮಿನಿ ವಿಧಾನ ಸೌಧ ನಿರ್ಮಾಣ ಕ್ಕೆ 20 ಕೋಟಿ ರೂ., ತಾಲೂಕಿನಲ್ಲಿ ಹಗರಿ ಸೇತುವೆ ನಿರ್ಮಾಣ ಕ್ಕೆ 60 ಕೋಟಿ ರೂ., ಬಳ್ಳಾರಿ ತಾಲೂಕು ಕುಡುತಿನಿ ಗ್ರಾಮದಲ್ಲಿ ನರ್ಸಿಂಗ್ ಕಾಲೇಜು ನಿರ್ಮಾಣಕ್ಕೆ 20 ಕೋಟಿ ರೂ., ಸಮುದಾಯ ಅರೋಗ್ಯ ಕೇಂದ್ರಕ್ಕೆ 15 ಕೋಟಿ ರೂ., ಜಿಲ್ಲೆಯಲ್ಲಿ ತೋಟಗಾರಿಕೆ ಕಾಲೇಜು ನಿರ್ಮಾಣ ಕ್ಕೆ 20 ಕೋಟಿ ರೂ. ಒದಗಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

====

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net