

ಹಾವೇರಿ: ಜಿಲ್ಲೆಯಲ್ಲಿ ಸೋಮವಾರ 56 ಜನರಿಗೆ ಪಾಸಿಟಿವ್ ದೃಢಪಟ್ಟಿದೆ. 54 ಜನರು ಗುಣವಾಗಿ ಬಿಡುಗಡೆ ಹೊಂದಿದ್ದಾರೆ. ಒಬ್ಬ ಮೃತಪಟ್ಟಿದ್ದಾನೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣನವರ ತಿಳಿಸಿದ್ದಾರೆ.
ಈವರೆಗೆ 1,242 ಕರೊನಾ ಪಾಸಿಟಿವ್ ಪ್ರಕರಣಗಳು ದೃಢಗೊಂಡಿವೆ. 655 ಜನರು ಸೋಂಕಿನಿಂದ ಗುಣವಾಗಿ ಬಿಡುಗಡೆ ಹೊಂದಿದ್ದಾರೆ. 29 ಜನರು ಮೃತಪಟ್ಟಿದ್ದಾರೆ. 555 ಪ್ರಕರಣಗಳು ಸಕ್ರಿಯವಾಗಿವೆ.
ಹಾವೇರಿ ತಾಲೂಕು ಗುತ್ತಲದಲ್ಲಿ 9 ಜನರಿಗೆ, ಅಗಡಿ ಗ್ರಾಮದಲ್ಲಿ 4 ಜನರಿಗೆ, ಹಾವನೂರ, ಸಂಗೂರ, ದೇವಿಹೊಸೂರ, ಕೆರಿಮತ್ತಿಹಳ್ಳಿ ಪೊಲೀಸ್ ಕ್ವಾರ್ಟರ್ಸ್ ಹಾಗೂ ನಗರದ ನಾಗೇಂದ್ರನಮಟ್ಟಿ, ಕೋಡಿಓಣಿ, ಎಸ್ಪಿ ಕಚೇರಿ ಕ್ವಾರ್ಟರ್ಸ್, ವಿದ್ಯಾನಗರ 2ನೇ ಕ್ರಾಸ್ನಲ್ಲಿ ತಲಾ ಒಬ್ಬರಿಗೆ ಸೇರಿ ಒಟ್ಟು 21 ಜನರಿಗೆ ಸೋಂಕು ದೃಢಪಟ್ಟಿದೆ.
ರಾಣೆಬೆನ್ನೂರ ನಗರದ ಚರ್ಚ್ ಕಾಂಪೌಂಡ್ ಹಾಗೂ ಚರ್ಚ್ ರಸ್ತೆಯಲ್ಲಿ ತಲಾ ಮೂವರಿಗೆ, ಕೆಎಚ್ಬಿ ಕಾಲನಿ, ಲಲಿತಭವನ, ಗೌರಿಶಂಕರ ನಗರ, ದೇವರಗುಡ್ಡ, ಕುಮಾರಪಟ್ಟಣ, ಹೊನ್ನತ್ತಿ, ಚೌಡಯ್ಯದಾನಪುರ, ಅರೇಮಲ್ಲಾಪುರದಲ್ಲಿ ತಲಾ ಒಬ್ಬರಿಗೆ ಸೇರಿ ಒಟ್ಟು 14 ಜನರಿಗೆ ಸೋಂಕು ತಗುಲಿದೆ.
ಶಿಗ್ಗಾಂವಿ ಪಟ್ಟಣದ ಮೆಹಬೂಬ ನಗರ, ಕೆಇಬಿ ಬಳಿ, ಮೌಲಾಲಿಗುಡ್ಡ, ಹಳೇಪೇಟೆ, ಶಾದಿಮಹಲ್, ಬಂಕಾಪುರದ ಕೊಟ್ಟಿಗೇರಿ ಓಣಿ, ಬನ್ನೂರ, ಕಬನೂರ ಗ್ರಾಮದಲ್ಲಿ ತಲಾ ಒಬ್ಬರಿಗೆ ಸೇರಿ ಒಟ್ಟು 8 ಜನರಿಗೆ ಸೋಂಕು ದೃಢಪಟ್ಟಿದೆ.
ಹಿರೇಕೆರೂರ ಪಟ್ಟಣದ ಚೌಡೇಶ್ವರಿ ನಗರ, ರಟ್ಟಿಹಳ್ಳಿ ಬನಶಂಕರಿ ನಗರ, ಶಿರಗಂಬಿ ಗ್ರಾಮದಲ್ಲಿ ತಲಾ ಒಬ್ಬರಿಗೆ, ಮಾಸೂರ ಗ್ರಾಮದಲ್ಲಿ ಮೂವರಿಗೆ ಸೇರಿ ಒಟ್ಟು 6 ಜನರಿಗೆ ಸೋಂಕು ದೃಢಪಟ್ಟಿದೆ.
ಬ್ಯಾಡಗಿ ತಾಲೂಕು ಬನ್ನಿಹಟ್ಟಿ ಗ್ರಾಮದ ಮೂವರಿಗೆ, ರಾಮಗೊಂಡನಹಳ್ಳಿಯಲ್ಲಿ ಒಬ್ಬರಿಗೆ ಒಟ್ಟು 4 ಜನರಿಗೆ ಸೋಂಕು ಖಚಿತವಾಗಿದೆ.
ಸವಣೂರ ಪಟ್ಟಣದ ಮಂಗಳವಾರ ಪೇಟೆ ಹಾಗೂ ಯಲವಿಗಿ ಗ್ರಾಮದ ತಲಾ ಒಬ್ಬರಿಗೆ ಸೇರಿ ಇಬ್ಬರಿಗೆ ಸೋಂಕು ದೃಢಪಟ್ಟಿದೆ.
ಹಾನಗಲ್ಲ ತಾಲೂಕು ಬೊಮ್ಮನಹಳ್ಳಿಯ ಒಬ್ಬರಿಗೆ ಸೋಂಕು ತಗುಲಿದೆ.
ಗುಣವಾದವರ ವಿವರ: ಸವಣೂರ ತಾಲೂಕಿನ 18, ಹಾವೇರಿ ತಾಲೂಕಿನ 15, ರಾಣೆಬೆನ್ನೂರ ಹಾಗೂ ಹಾನಗಲ್ಲ ತಾಲೂಕಿನ ತಲಾ 6 ಜನ, ಶಿಗ್ಗಾಂವಿ ತಾಲೂಕಿನ 5, ಬ್ಯಾಡಗಿ ತಾಲೂಕಿನ 3, ಹಾನಗಲ್ಲ ತಾಲೂಕಿನ ಒಬ್ಬರು ಸೇರಿ ಒಟ್ಟು 54 ಜನ ಗುಣವಾಗಿ ಬಿಡುಗಡೆಯಾಗಿದ್ದಾರೆ.
ಓರ್ವ ವೃದ್ಧ ಸಾವು: ಹಾವೇರಿ ನಗರದ ಕಲ್ಲುಮಂಟಪ ಓಣಿಯ 74 ವರ್ಷದ ವೃದ್ಧ ತೀವ್ರ ಉಸಿರಾಟದ ತೊಂದರೆಯಿಂದ ಜು. 29ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ರ್ಯಾಪಿಡ್ ಆಂಟಿಜನ್ ಟೆಸ್ಟ್ ಮೂಲಕ ಪರೀಕ್ಷಿಸಿದಾಗ ಕೋವಿಡ್ ಪಾಸಿಟಿವ್ ದೃಢಪಟ್ಟಿತ್ತು. ಆ. 3ರಂದು ಮೃತಪಟ್ಟಿದ್ದಾರೆ. ಕೋವಿಡ್ ನಿಯಮಾವಳಿ ಅನುಸಾರ ಶವಸಂಸ್ಕಾರ ಮಾಡಲಾಗಿದೆ.