ದ.ಕ. 377, ಉಡುಪಿ 175 ಪಾಸಿಟಿವ್

corona
Published on

ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ 9 ಸಾವು ಸೇರಿದಂತೆ 377 ಕರೊನಾ ಪಾಸಿಟಿವ್ ಪ್ರಕರಣ ವರದಿಯಾಗಿದ್ದರೆ, ಅದೇ ದಿನ 311 ಮಂದಿ ಗುಣವಾಗಿ ಡಿಸ್‌ಚಾರ್ಜ್ ಆಗಿದ್ದಾರೆ.

ಒಟ್ಟು ಪ್ರಕರಣಗಳಲ್ಲಿ 216 ಮಂದಿಗೆ ರೋಗಲಕ್ಷಣಗಳಿವೆ, 161 ಮಂದಿಗೆ ರೋಗ ಚಿಹ್ನೆಗಳಿಲ್ಲ. 192 ಮಂದಿ ಮಂಗಳೂರು ತಾಲೂಕಿನವರು. ಬಂಟ್ವಾಳ 45, ಪುತ್ತೂರು 64, ಸುಳ್ಯದ 37, ಬೆಳ್ತಂಗಡಿಯ 20, ಇತರ ಜಿಲ್ಲೆಯ 19 ಮಂದಿ ಸೇರಿದ್ದಾರೆ.

50 ಮಂದಿಗೆ ನೇರ ಸಂಪರ್ಕದಿಂದ ಸೋಂಕು ತಗಲಿದ್ದರೆ ಐಎಲ್‌ಐ ಚಿಹ್ನೆಗಳಿದ್ದ 178 ಮಂದಿ, ತೀವ್ರ ಉಸಿರಾಟ ತೊಂದರೆಯಿದ್ದ 19 ಮಂದಿಗೆ ಪಾಸಿಟಿವ್ ಆಗಿದೆ.

ಜಿಲ್ಲೆಯಲ್ಲಿ ಒಟ್ಟು ಪಾಸಿಟಿವ್ ಸಂಖ್ಯೆ 14,600ಕ್ಕೇರಿದ್ದು ಮೃತರ ಸಂಖ್ಯೆ 400 ತಲುಪಿದೆ. ಸಕ್ರಿಯ ಪ್ರಕರಣಗಳು 2961 ತಲುಪಿದ್ದು ಬಿಡುಗಡೆಯಾದವರ ಒಟ್ಟು ಸಂಖ್ಯೆ 11,239ಕ್ಕೇರಿಕೆಯಾಗಿದೆ.

ಕಾಸರಗೋಡು ಜಿಲ್ಲೆಯ 276 ಮಂದಿ ಸೇರಿ ಕೇರಳದಲ್ಲಿ ಶನಿವಾರ 2,665 ಮಂದಿಗೆ ಕೋವಿಡ್-19 ಬಾಧಿಸಿದೆ. ಜಿಲ್ಲೆಯ ಒಬ್ಬರು ಸೇರಿ ರಾಜ್ಯದಲ್ಲಿ 11 ಮಂದಿ ಮೃತಪಟ್ಟಿದ್ದಾರೆ.

175 ಮಂದಿಗೆ ಸೋಂಕು: ಉಡುಪಿ ಜಿಲ್ಲೆಯಲ್ಲಿ ಶನಿವಾರ 175 ಮಂದಿಗೆ ಕೋವಿಡ್ ಪಾಸಿಟಿವ್ ವರದಿಯಾಗಿದೆ. ಅನಾರೋಗ್ಯಕ್ಕೀಡಾಗಿ ಮೃತಪಟ್ಟ ನಾಲ್ವರು ಹಿರಿಯ ನಾಗರಿಕರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಸಾವಿನ ಸಂಖ್ಯೆ 112ಕ್ಕೆ, ಒಟ್ಟು ಸೋಂಕಿತರ ಸಂಖ್ಯೆ 12504ಕ್ಕೆ ಏರಿಕೆಯಾಗಿದೆ. 1435 ಮಂದಿಯ ಗಂಟಲ ದ್ರವ ಮಾದರಿ ಸಂಗ್ರಹಿಸಲಾಗಿದೆ. 1996 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net