ಎಟಿಎಂ ಕಾರ್ಡ್ ಕದ್ದು 55 ಸಾವಿರ ರೂ. ವಂಚನೆ

online-fraud
Published on

ನರಗುಂದ: ಪಟ್ಟಣದ ಯೂನಿಯನ್ ಬ್ಯಾಂಕ್ ಎಟಿಎಂನಲ್ಲಿ ಹಣ ಡ್ರಾ ಮಾಡಿಕೊಳ್ಳಲು ಹೋದ ಗ್ರಾಹಕನಿಗೆ ಅಪರಿಚಿತ ವ್ಯಕ್ತಿಯೊಬ್ಬ 55,200 ರೂಪಾಯಿ ವಂಚನೆ ಮಾಡಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಪಟ್ಟಣದ ಸೋಮಾಪೂರ ರಾಚಯ್ಯನಗರ ಬಡಾವಣೆ ನಿವಾಸಿ ಬಸವರಾಜ ಮಲಿಯಪ್ಪ ಸೋಮಣ್ಣವರ ವಂಚನೆಗೊಳಗಾದವರು. ಇವರು ಜೂ. 25ರಂದು ಪಟ್ಟಣದ ಯೂನಿಯನ್ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದ ತನ್ನ ಪತ್ನಿಯ ಎಟಿಎಂ ಕಾರ್ಡ್‌ನಿಂದ ಹಣ ಡ್ರಾ ಮಾಡಿಕೊಳ್ಳಲು ಹೋಗಿದ್ದರು. ಈ ವೇಳೆ ಹೆಲ್ಮೆಟ್ ಧರಿಸಿ ಎಟಿಎಂನೊಳಗೆ ಆಗಮಿಸಿದ ಅಪರಿಚಿತ ವ್ಯಕ್ತಿ ಬಸವರಾಜನ ಹಿಂದೆ ನಿಂತು ಸೂಕ್ಷ್ಮವಾಗಿ ಪಿನ್‌ಕೋಡ್ ನಂಬರ್ ಗಮನಿಸಿದ್ದಾನೆ. ಸಾಲದೆಂಬಂತೆ ಸಹಾಯ ಮಾಡುವ ನೆಪದಲ್ಲಿ ಕಾರ್ಡ್ ಬದಲಾಯಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಎಟಿಎಂ ಕಾರ್ಡ್ ಕದ್ದ ದಿನವೇ 30,200 ರೂ. ಮರುದಿನ 25 ಸಾವಿರ ರೂ. ಸೇರಿ ಒಟ್ಟು 55,200 ರೂಪಾಯಿ ಡ್ರಾ ಮಾಡಲಾಗಿದೆ. ಸಾಕಷ್ಟು ಶೋಧಕಾರ್ಯ ನಡೆಸಿದರೂ ಅಪರಿಚಿತ ವ್ಯಕ್ತಿ ಪತ್ತೆಯಾಗದ ಕಾರಣ ಬಸವರಾಜ ಸೋಮಣ್ಣನವರ ಜುಲೈ 5ರಂದು ನರಗುಂದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net