ರಿಯಲ್ ಎಸ್ಟೇಟ್‌ನಲ್ಲಿ 55 ಲಕ್ಷ ರೂ. ವಂಚನೆ

MUDA
Published on

ಮೈಸೂರು: ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಪಾಲುದಾರಿಕೆ ನೀಡುವುದಾಗಿ ನಂಬಿಸಿ ವ್ಯಕ್ತಿಗಳಿಬ್ಬರು ವಂಚಿಸಿದ್ದಾರೆ ಎಂದು ವೃದ್ಧರೊಬ್ಬರು ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯನಗರ 2ನೇ ಹಂತದ ನಿವಾಸಿ ಗಜಾನನ ಭಟ್ ವಂಚನೆಗೆ ಒಳಗಾದವರು. ಬಾಬಯ್ಯ ಸ್ವಾಮಿ ನಾಯ್ಡು ಹಾಗೂ ಬ್ರಹ್ಮಾನಂದ ರೆಡ್ಡಿ ಎಂಬವರು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗುವಂತೆ ಹೇಳಿ 55 ಲಕ್ಷ ರೂ. ಪಡೆದು ವಂಚಿಸಿದ್ದು, ಇದೀಗ ಹಣ ಕೇಳಿದರೂ ವಾಪಾಸ್ ನೀಡುತ್ತಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ. ವಿಜಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net