55ಗ್ರಾಂ ಚಿನ್ನಾಭರಣ, 6 ಬೈಕ್ ವಶಕ್ಕೆ

55 grams of gold, 6 bikes seized
ಜಮಖಂಡಿ ನಗರದ ಪೊಲೀಸ್ ಠಾಣೆಯಲ್ಲಿ ವಶಕ್ಕೆ ಪಡೆದ ವಸ್ತುಗಳೊಂದಿಗೆ ಪೊಲೀಸ್ ಅಧಿಕಾರಿಗಳು.
Published on

ಜಮಖಂಡಿ: ನಗರದ ದೇಸಾಯಿ ವೃತ್ತದಲ್ಲಿ ಅನುಮಾನಾಸ್ಪದವಾಗಿ ಬೈಕ್‌ನಲ್ಲಿ ಸಂಚರಿಸುತ್ತಿದ್ದ ಸವಾರನನ್ನು ಪೊಲೀಸರು ಬಂಧಿಸಿ ಆತನಿಂದ 55 ಗ್ರಾಂ ಚಿನ್ನಾಭರಣ, 6 ಬೈಕ್ ವಶಪಡಿಸಿಕೊಂಡಿದ್ದಾರೆ.

ತಾಲೂಕಿನ ಹುಣಸಿಕಟ್ಟಿ ಗ್ರಾಮದ ಗಣೇಶ ಶಂಕ್ರೆಪ್ಪ ಇಂಗಳಗಿ(28) ಬಂಧಿತ ಆರೋಪಿ. ಆತನಿಂದ 3.30 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 2 ಲಕ್ಷ ರೂ. ಮೌಲ್ಯದ 6 ಬೈಕ್ ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ ಎಂದು ಡಿವೈಎಸ್‌ಪಿ ಶಾಂತವೀರ ತಿಳಿಸಿದ್ದಾರೆ.

ತನಿಖಾ ತಂಡದಲ್ಲಿ ಸಿಪಿಐ ಮಲ್ಲಪ್ಪ ಮಡ್ಡಿ, ಪಿಎಸ್‌ಐ ನಾಗರಾಜ ಖಿಲಾರೆ, ಎಚ್.ಎಸ್. ಮೆಂಡೆಗಾರ, ಬಿ.ಎಂ. ಕುಂಬಾರ, ಎಸ್.ಎಚ್. ಕೋಟೆ, ಬಿ.ಎಂ. ಜಂಬಗಿ, ಎಸ್.ಎಸ್. ತುಪ್ಪದ, ಪಿ.ಎಚ್. ಘಾಟಗೆ, ಎಸ್.ಬಿ. ಹನಗಂಡಿ, ಎಂ.ಎಸ್. ಕೋಲಾರ, ಎಂ.ಡಿ. ಕೆರೂರ, ರಾಜು ಮನಗೂಳಿ ಇತರರು ಇದ್ದರೆಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net