ಕಳೆದ ೨೪ ಗಂಟೆಯಲ್ಲಿ ೫೫.೮೮ ಮಿ.ಮೀ. ಮಳೆ

rain
Published on

ಮಡಿಕೇರಿ: ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ ೮.೩೦ಕ್ಕೆ ಕೊನೆಗೊಂಡಂತೆ ಕಳೆದ ೨೪ ಗಂಟೆ ಅವಧಿಯಲ್ಲಿ ಸರಾಸರಿ ೫೫.೮೮ ಮಿ.ಮೀ. ಮಳೆಯಾಗಿದೆ.

ಮಡಿಕೇರಿ ತಾಲೂಕಿನಲ್ಲಿ ಸರಾಸರಿ ೮೮.೨೫ ಮಿ.ಮೀ, ವಿರಾಜಪೇಟೆ ತಾಲೂಕಿನಲ್ಲಿ ಸರಾಸರಿ ೪೦.೪೫ ಮಿ.ಮೀ, ಪೊನ್ನಂಪೇಟೆ ತಾಲೂಕಿನಲ್ಲಿ ಸರಾಸರಿ ೩೯.೦೮ ಮಿ.ಮೀ, ಸೋಮವಾರಪೇಟೆ ತಾಲೂಕಿನಲ್ಲಿ ಸರಾಸರಿ ೮೫.೩೦ ಮಿ.ಮೀ, ಕುಶಾಲನಗರ ತಾಲೂಕಿನಲ್ಲಿ ಸರಾಸರಿ ೨೬.೩೦ ಮಿ.ಮೀ. ಮಳೆಯಾಗಿದೆ.

ಜಿಲ್ಲೆಯ ಹೋಬಳಿವಾರುಗಳಾದ ಮಡಿಕೇರಿ ಕಸಬಾ ೫೭, ನಾಪೋಕ್ಲು ೬೮.೬೦, ಸಂಪಾಜೆ ೯೬, ಭಾಗಮಂಡಲ ೧೩೧.೪೦, ವಿರಾಜಪೇಟೆ ೪೫.೪೦, ಅಮ್ಮತ್ತಿ ೩೫.೫೦, ಹುದಿಕೇರಿ ೩೪.೩೦, ಶ್ರೀಮಂಗಲ ೬೬, ಪೊನ್ನಂಪೇಟೆ ೩೫, ಬಾಳೆಲೆ ೨೧, ಸೋಮವಾರಪೇಟೆ ೭೪.೨೦, ಶನಿವಾರಸಂತೆ ೬೮, ಶಾಂತಳ್ಳಿ ೧೫೬, ಕೊಡ್ಲಿಪೇಟೆ ೪೩, ಕುಶಾಲನಗರ ೧೨.೬೦, ಸುಂಟಿಕೊಪ್ಪ ೪೦ ಮಿ.ಮೀ.ಮಳೆಯಾಗಿದೆ.

ಹಾರಂಗಿ ಜಲಾಶಯದ ಗರಿ? ಮಟ್ಟ ೨,೮೫೯ ಅಡಿಗಳಿದ್ದು, ೨೮೫೬.೫೦ ಅಡಿ ನೀರು ಸಂಗ್ರಹವಾಗಿದೆ. ಇಂದಿನ ನೀರಿನ ಒಳಹರಿವು ೬೩೪೩ ಕ್ಯುಸೆಕ್‌ಇದ್ದು, ಹೊರ ಹರಿವು ನದಿಗೆ ೫೮೧೨ ಕ್ಯುಸೆಕ್‌ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net