540 ಕೋಟಿ ರೂ. ಕ್ರಿಯಾ ಯೋಜನೆಗೆ ಅನುಮೋದನೆ ; ತುಮಕೂರು ಜಿಪಂ ಆಡಳಿತಾಧಿಕಾರಿ ರಾಕೇಶ್‌ಸಿಂಗ್ ಅಧ್ಯಕ್ಷತೆಯಲ್ಲಿ ಸಭೆ

ZP meeting
Published on

ತುಮಕೂರು: ಜಿಲ್ಲಾ ಪಂಚಾಯಿತಿ ಆಡಳಿತಾಧಿಕಾರಿ ರಾಕೇಶ್‌ಸಿಂಗ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಜಿಪಂ ಸಭಾಂಗಣದಲ್ಲಿ ನಡೆದ ಜಿಪಂ ಸಾಮಾನ್ಯ ಸಭೆಯಲ್ಲಿ ಲಿಂಕ್ ಡಾಕ್ಯುಮೆಂಟ್ ಕಾರ್ಯಕ್ರಮ, 15ನೇ ಹಣಕಾಸು ಯೋಜನೆ ಸೇರಿ 540 ಕೋಟಿ ರೂ. ವಿವಿಧ ಕಾಮಗಾರಿಗಳ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಯಿತು.

ಶಾಲಾ ಮಕ್ಕಳಿಗಾಗಿ ರೂಪಿಸಿರುವ ಅಕ್ಷರ ದಾಸೋಹ ಕಾರ್ಯಕ್ರಮ ಯಶಸ್ವಿಗೊಳಿಸಬೇಕು. ಮಕ್ಕಳಿಗೆ ನೀಡಲಾಗುವ ಉಚಿತ ಆಹಾರ ಧಾನ್ಯಗಳ ವಿತರಣೆಗೆ ಸೂಕ್ತ ಕ್ರಮವಹಿಸಬೇಕು. ಎಸ್ಸಿ-ಎಸ್ಟಿ ಒಬಿಸಿ, ಅಲ್ಪಸಂಖ್ಯಾತ ವಿದ್ಯಾರ್ಥಿಗಳು ವಸತಿ ನಿಲಯಗಳನ್ನು ಉತ್ತಮವಾಗಿ ನಿರ್ವಹಣೆ ಮಾಡಬೇಕು ಎಂದು ಅಧಿಕಾರಿಗಳಿಗೆ ರಾಕೇಶ್‌ಸಿಂಗ್ ಸೂಚಿಸಿದರು.

ಕೃಷಿ ಇಲಾಖೆ ರೈತರಿಗೆ ನೀಡಲಾಗುವ ಬಿತ್ತನೆ, ಬೀಜ, ರಸಗೊಬ್ಬರ, ಬೆಳೆ ಪರಿಸ್ಥಿತಿ ಬಗ್ಗೆ ಮತ್ತು ಬೆಳೆಯಲಾಗುವ ಮಿಶ್ರ ಬೆಳೆಗಳ ಬಗ್ಗೆ ತಾಲೂಕುವಾರು, ಅಂಕಿ ಅಂಶ ಲಭ್ಯವಿರಬೇಕು ಹಾಗೂ ತೋಟಗಾರಿಕೆ ಇಲಾಖೆ ವಿವಿಧ ಕಾರ್ಯಕ್ರಮಗಳನ್ನು ರೂಪಿಸಿ ರೈತರಿಗೆ ಪ್ರೋತ್ಸಾಹಧನ, ಇತರ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ ಗ್ರಾಮೀಣ ಕುಡಿಯುವ ನೀರು ಯೋಜನೆಯಡಿ ಕೈಗೊಂಡಿರುವ ಅಭಿವೃದ್ಧಿ, ಹೂಳೆತ್ತುವುದು, ಕಾಲುವೆ ನಿರ್ವಹಣೆ ಸೇರಿ ನೀರಾವರಿಗೆ ಸಂಬಂಧಿಸಿದ ಎಲ್ಲ ಕಾರ್ಯಕ್ರಮ ಹಾಗೂ ಮೂಲಸೌಕರ್ಯಗಳನ್ನು ಅನುಷ್ಠಾನಗೊಳಿಸುವಂತೆ ಸೂಚಿಸಿದರು. ಸಭೆಯಲ್ಲಿ ಲಿಂಕ್ ಡಾಕ್ಯುಮೆಂಟ್‌ನಡಿ ಲೋಕೋಪಯೋಗಿ ಇಲಾಖೆಯ 7.98 ಕೋಟಿ ರೂ. ಅಕ್ಷರ ದಾಸೋಹ 88.79 ಕೋಟಿ ರೂ., ಸಾವಾನ್ಯ ಶಿಕ್ಷಣ 173.97 ಕೋಟಿ ರೂ., ಜನಶಿಕ್ಷಣ 60.11 ಲಕ್ಷ ರೂ., ಕ್ರೀಡಾ ಮತ್ತು ಯುವಜನ ಸೇವೆಗಳು 1.11 ಕೋಟಿ ರೂ., ಕಲೆ ಮತ್ತು ಸಂಸ್ಕೃತಿ 6 ಲಕ್ಷ ರೂ., ವೈದ್ಯಕೀಯ ಮತ್ತು ಜನಾರೋಗ್ಯ 59.78 ಕೋಟಿ ರೂ., ಕುಟುಂಬ ಕಲ್ಯಾಣ 34.79 ಕೋಟಿ ರೂ., ಆಯುಷ್ 5.93 ಕೋಟಿ ರೂ., ಪರಿಶಿಷ್ಟ ಜಾತಿ ಕಲ್ಯಾಣ 29.19 ಕೋಟಿ ರೂ., ಮೀಸಲಿಡಲಾಗಿದೆ.

ಪರಿಶಿಷ್ಟ ಪಂಗಡ ಕಲ್ಯಾಣ 10.9 ಕೋಟಿ ರೂ., ಹಿಂದುಳಿದ ವರ್ಗಗಳ ಕಲ್ಯಾಣ 53.86 ಕೋಟಿ ರೂ. ಅಲ್ಪಸಂಖ್ಯಾತರ ಕಲ್ಯಾಣ 4.99 ಕೋಟಿ ರೂ., ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿ 83.91 ಲಕ್ಷ ರೂ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ 3.03 ಕೋಟಿ ರೂ., ಕೃಷಿ 3.09 ಕೋಟಿ ರೂ., ಭೂಸಾರ ಮತ್ತು ಜಲ ಸಂರಕ್ಷಣೆ 1.33 ಕೋಟಿ ರೂ., ತೋಟಗಾರಿಕೆ 7.99 ಕೋಟಿ ರೂ., ಪಶುಸಂಗೋಪನೆ 5.33 ಕೋಟಿ ರೂ., ಮೀನುಗಾರಿಕೆ 1.88 ಕೋಟಿ ರೂ., ಅರಣ್ಯ(ಸಾವಾಜಿಕ) 9.96 ಕೋಟಿ ರೂ. ಸಹಕಾರ 3 ಲಕ್ಷ ರೂ., ಆರ್.ಡಿ.ಪಿ.ಆರ್. 3.91 ಕೋಟಿ ರೂ., ಸಣ್ಣ ನೀರಾವರಿ 2.04 ಕೋಟಿ ರೂ., ಮೀಸಲಿಡಲಾಗಿದೆ.

ರೇಷ್ಮೆ 4.60 ಕೋಟಿ ರೂ., ಗ್ರಾಮೀಣ ಮತ್ತು ಕೈಗಾರಿಕೆಗಳು 1.12 ಕೋಟಿ ರೂ., ಕೈಮಗ್ಗ ಮತ್ತು ಜವಳಿ 69.92 ಲಕ್ಷ ರೂ., ರಸ್ತೆ ಮತ್ತು ಸೇತುವೆಗಳು7.31 ಕೋಟಿ , ಇತರ ವಿಜ್ಞಾನ ಸಂಶೋಧನೆ 5.50 ಲಕ್ಷ ರೂ. ಸಚಿವಾಲಯ ಆರ್ಥಿಕ ಸೇವೆಗಳು 87.57 ಲಕ್ಷ ರೂ., ಕೃಷಿ ವಾರುಕಟ್ಟೆಗೆ 4.41 ಲಕ್ಷ ರೂ., 15ನೇ ಹಣಕಾಸು ಯೋಜನೆಗಾಗಿ 6.63 ಕೋಟಿ ರೂ., ಜಿಪಂ ಅನಿಬರ್ಂಧಿತ ಅನುದಾನಕ್ಕಾಗಿ 6.93 ಕೋಟಿ ರೂ ಸೇರಿ ಒಟ್ಟು 540 ಕೋಟಿ ರೂಪಾಯಿ ರೂ. ಅನುದಾನಕ್ಕೆ ಅನುಮೋದನೆ ನೀಡಲಾಯಿತು.

ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net