

ಸಿರಿಗೇರಿ: ಧಾರ್ಮಿಕ ಕಾರ್ಯಗಳಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಡುಗೆ ಅನನ್ಯವಾಗಿದೆ ಎಂದು ಯೋಜನೆಯ ಜಿಲ್ಲಾ ನಿರ್ದೇಶಕ ರೋಹಿತಾಕ್ಷ ಹೇಳಿದರು.
ಗ್ರಾಮದ ಶ್ರೀ ಬನಶಂಕರಿ ದೇವಸ್ಥಾನ ಜೀರ್ಣೋದ್ಧಾರಕ್ಕೆ ಸೋಮವಾರ 1.50 ಲಕ್ಷ ರೂ. ಸಹಾಯಧನ ನೀಡಿ ಮಾತನಾಡಿದರು. ರಾಜ್ಯಾದ್ಯಂತ ಧಾರ್ಮಿಕ ಶ್ರದ್ಧೆ ಮತ್ತು ಭಕ್ತಿ ಭಾವ, ಆಧ್ಯಾತ್ಮಿಕತೆ ಹೆಚ್ಚಿಸಲು ಹಳೇ ದೇವಸ್ಥಾನಗಳ ಪುನಶ್ಚೇತನಕ್ಕೆ ಸಹಾಯ ಹಸ್ತ ಚಾಚುತಿದ್ದು, ಈವರೆಗೆ ಸಿರಗುಪ್ಪ ತಾಲೂಕಿನ 39 ದೇವಸ್ಥಾನಗಳಿಗೆ 54 ಲಕ್ಷ ರೂ. ನೆರವು ನೀಡಲಾಗಿದೆ.
ಅಲ್ಲದೆ 152 ದೇವಸ್ಥಾನಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಿ ಕಸ ವಿಲೇವಾರಿಗೆ ಪರಿಕರ ವಿತರಿಸಲಾಗಿದೆ. ಭಜನಾ ಮಂಡಳಿಗಳಿಗೆ ಕಟ್ಟಡ ರಚನೆ ಹಾಗೂ ತರಬೇತಿಗೆ ಸಹಕಾರ ನಿಡಲಾಗುತ್ತಿದೆ ಎಂದು ತಿಳಿಸಿದರು.
ಜಿಪಂ ಮಾಜಿ ಸದಸ್ಯ ಕೆ.ಭೀಮಲಿಂಗಪ್ಪ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಹೊಳಗುಂದಿ ಲಕ್ಷ್ಮೀ ಕೆ.ದ್ಯಾವಣ್ಣ, ಉಪಾಧ್ಯಕ್ಷೆ ರಾಜಮ್ಮ ಹುಲಗಪ್ಪ, ತಾಲೂಕು ಯೋಜನಾಧಿಕಾರಿ ಸುಧೀರ್ ಹಂಗಳೂರು, ಮೇಲ್ವಿಚಾರಕರಾದ ಹನುಮಂತಪ್ಪ, ಸೇವಾ ಪ್ರತಿನಿಧಿ ಪಾರ್ವತಿ, ಲಿಂಗನಗೌಡ ಶ್ರೀ ಬನಶಂಕರಿ ದೇವಸ್ಥಾನ ಸಮಿತಿ ಅಧ್ಯಕ್ಷ ಕೆ.ವೇಮಣ್ಣ, ಪ್ರಮುಖರಾದ ಲಕ್ಷ್ಮಣ, ವಿ.ಶೇಖರ್ ಇತರರಿದ್ದರು.