54 ಲಕ್ಷ ರೂ. ಮರಳಿಸದೇ ವಂಚನೆ

crime
Published on

ಹುಬ್ಬಳ್ಳಿ: ನಗರದ ಎಪಿಎಂಸಿಯಲ್ಲಿ ಒಣ ಮೆಣಸಿನಕಾಯಿ ಮಾರಾಟಗಾರರಿಂದ 86.81 ಲಕ್ಷ ರೂ. ಮೌಲ್ಯದ ಒಣ
ಮೆಣಸಿನಕಾಯಿ ಖರೀದಿಸಿ 54 ಲಕ್ಷ ರೂಪಾಯಿ ಹಣ ನೀಡದೆ ವಂಚಿಸಿದಲ್ಲದೆ, ಹಣ ಕೇಳಿದರೆ ಜೀವ ತಗೆಯುವುದಾಗಿ ಬೆದರಿಕೆ ಹಾಕಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮಹಾರಾಷ್ಟದ ಮೂಲದ ಅಸಮಕ್ಕುಲಾಲ, ಅಕಿಂತಾ, ದಾವಲ್ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.
ಫೆ. 24, 2023ರಿಂದ ಒಟ್ಟು 86.81 ಲಕ್ಷ ಮೌಲ್ಯದ ಒಣ ಮೆಣಸಿನಕಾಯಿ ಖರೀದಿ ಮಾಡಿದ್ದಾರೆ. ನಂತರ ಜೂನ್ 30 ರವರೆಗೆ 31.50 ಲಕ್ಷ ರೂಪಾಯಿ ಮರಳಿಸಿದ್ದು, 54.81 ಲಕ್ಷ ರೂಪಾಯಿ ಕೊಡದೆ ವಂಚಿಸಿದ್ದಾರೆ. ಇದನ್ನು ಕೇಳಿದಾಗ ಜೀವ ಬೆದರಿಕೆ ಹಾಕಿದ್ದಾರೆ ಎಂದು ಶಂಭುಲಿಂಗೇಶ್ವರ ಟ್ರೆಡರ್ಸ್‌ನ ಶಂಭುಲಿಂಗಪ್ಪ ಅಂಗಡಿ ಎಂಬುವವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net