

ಹಾಸನ: ನಗರದ ಶ್ರೀ ರುಕ್ಮಿಣಿ ಪಾಂಡುರಂಗಸ್ವಾಮಿ ದೇವಸ್ಥಾನದಲ್ಲಿ 53ನೇ ಪ್ರಥಮ ಏಕಾದಶಿ ದಿಂಡಿ ಮಹೋತ್ಸವನ್ನು ಬುಧವಾರ ವಿಜೃಂಭಣೆಯಿಂದ ಆಚರಿಸಲಾಯಿತು.
ಭಾವಸಾರ ಕ್ಷತ್ರಿಯ ಮಂಡಳಿ ಮತ್ತು ಜೈ ಮಾತಾ ಮಹಿಳಾ ಮಂಡಳಿ ಇವರ ಸಂಯುಕ್ತಾಶ್ರಯದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ಪ್ರಥಮ ಏಕಾದಶಿ ದಿಂಡಿ ಮಹೋತ್ಸವವು ಮುಂಜಾನೆ ಶ್ರೀ ರುಕ್ಮಿಣಿ ಪಾಂಡುರಂಗ ಸ್ವಾಮಿ ಅವರಿಗೆ ಅಭಿಷೇಕ, ಕಾಕಡ ಆರತಿಯಿಂದ ಆರಂಭವಾಗಿ ಶ್ರೀ ಪಾಂಡುರಂಗ ಸ್ವಾಮಿಯವರ ಉತ್ಸವ ಪಂಡರಿ ಸಂಪ್ರದಾಯದಂತೆ ಚಾಲನೆ ದೊರಕಿತು.
ನಂತರ ನಗರದ ಪ್ರಮುಖ ರಾಜಬೀದಿಯಲ್ಲಿ ವೈಭವದ ಉತ್ಸವವು ಸಾಗಿತು. ವಿವಿಧ ಕಲಾತಂಡಗಳು ಭಾಗವಹಿಸಿದ್ದವು. ತುಂತುರು ಮಳೆಯ ನಡುವೆಯೂ ಅಪಾರ ಸಂಖೆಯಲ್ಲಿ ಭಕ್ತರು ಮೆರವಣಿಗೆಯಲ್ಲಿ ಭಾಗವವಹಿಸಿದರು.
ಒಂಬತ್ತು ದಿನದ ಉತ್ಸವ ನಡೆಯಲಿದ್ದು, ಕೊನೆಯ ದಿನ ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗ ವಿರುತ್ತದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರಸಾದವನ್ನು ಸ್ವೀಕರಿಸಿ ಶ್ರೀ ರುಕ್ಮಿಣಿ ಪಾಂಡುರಂಗ ಸ್ವಾಮಿಯವರ ಕೃಪೆಗೆ ಪಾತ್ರರಾಗಬೇಕಾಗಿ ಮನವಿ ಮಾಡಿದ್ದಾರೆ.
ಇದೆ ವೇಳೆ ಭಾವಸಾರ ಕ್ಷತ್ರಿಯ ಮಂಡಳಿಯ ಅಧ್ಯಕ್ಷ ಚಿರಂತ್ ಬೈರಾಟೆ, ಉಪಾಧ್ಯಕ್ಷ ಬಿ.ಎಲ್. ನಿರ್ವಾಹಣೆ ರಾವ್ ಮಹಳತ್ಕರ್, ಕಾರ್ಯದರ್ಶಿ ಚಂದ್ರಕಾಂತ್ ನಾಜರೆ, ಸಹ ಕಾರ್ಯದರ್ಶಿ ಜಿ.ಎಸ್. ನರೇಂದ್ರ ಗದ್ದಾಳೆ, ಖಜಾಂಚಿ ಜೆ. ಅಂಬರೀಶ್, ಜೈ ಮಾತಾ ಮಹಿಳಾ ಮಂಡಳಿಯ ಗೌರವಾಧ್ಯಕ್ಷೆ ವಿಮಲಾ ಶ್ರೀನಿವಾಸ್ ಗದ್ದಾಳೆಮ, ಅಧ್ಯಕ್ಷೆ ಸುನೀತಾ ರಮೇಶ್ ಕಲೋಸೆ, ಉಪಾಧ್ಯಕ್ಷೆ ಚಂದ್ರಿಕಾ ನಾರಾಯಣ್ ನಾಜರೆ, ಕಾರ್ಯದರ್ಶಿ ಶ್ವೇತಾ ಸುನೀಲ್ ಘನಾತೆ, ಖಜಾಂಚಿ ರಿಚ ಕಿಶನ್ ನಾಜರೆ ಇತರರು ಇದ್ದರು.