ತುಮಕೂರು: ಕ್ಷಯರೋಗ ಸಂಪೂರ್ಣ ಗುಣಮುಖವಾಗುವ ರೋಗವಾಗಿದ್ದು, ಡಿಸೆಂಬರ್-2024ರ ಅಂತ್ಯದವರೆಗೆ ಜಿಲ್ಲೆಯಲ್ಲಿ ಪತ್ತೆಯಾಗಿರುವ 64,562 ಕ್ಷಯ ರೋಗಿಗಳ ಪೈಕಿ 52,292 ರೋಗಿಗಳು ಚಿಕಿತ್ಸೆ ಪಡೆದು ರೋಗದಿಂದ ಗುಣಮುಖರಾಗಿದ್ದಾರೆ. 1471 ರೋಗಿಗಳು ಶ್ರೀದಲ್ಲಿಯೇ ರೋಗದಿಂದ ಹೊರಬರಲಿದ್ದಾರೆ.
ರಾಷ್ಟ್ರೀಯ ಕ್ಷಯ ರೋಗ ನಿಮೂರ್ಲನಾ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಡಾಟ್ಸ್ ವಿಧಾನ ಜಾರಿಗೆ ಬಂದಾಗಿನಿಂದ 2024ನೇ ಸಾಲಿನಲ್ಲಿ 2856 ಕ್ಷಯರೋಗಿಗಳನ್ನು ಪತ್ತೆ ಹಚ್ಚಿ "ಡಾಟ್ಸ್' ಚಿಕಿತ್ಸೆಗೆ ಒಳಪಡಿಸಲಾಗಿದೆ. ಪ್ರಸ್ತುತ ಜಿಲ್ಲೆಯಾದ್ಯಂತ ಸುಮಾರು 1471 ಕ್ಷಯರೋಗಿಗಳು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.
ಕ್ಷಯರೋಗ ಬೇಗ ಪತ್ತೆ ಹಚ್ಚಿದಲ್ಲಿ ಸಾವು, -ನೋವುಗಳನ್ನು ಗಣನೀಯವಾಗಿ ಕಡಿಮೆ ಮಾಡಬಹುದಾಗಿದೆ. ಎರಡು ವಾರಕ್ಕೂ ಹೆಚ್ಚಿನ ಅವಧಿಯವರೆಗೆ ಕೆಮ್ಮು ಇರುವ ವ್ಯಕ್ತಿಯನ್ನು ಶಂಕಿತ ರೋಗಿ ಎಂದು ಪರಿಗಣಿಸಿ 2 ಬಾರಿ ಕಾ ಪರೀಕ್ಷೆಗೆ ಒಳಪಡಿಸಲಾಗುವುದು. ಕಾ ಪರೀಕ್ಷೆಯ ಮೂಲಕ ರೋಗ ಪತ್ತೆಯಾಗದಿದ್ದಲ್ಲಿ 10 ದಿನಗಳ ಸಾಮಾನ್ಯ "ಆಂಟಿಬಯೋಟಿಕ್' ಚಿಕಿತ್ಸೆಗೊಳಪಡಿಸಲಾಗುವುದು. ನಂತರವೂ ಕೆಮ್ಮಿನ ಲಕ್ಷಣಗಳು ಹಾಗೇ ಮುಂದುವರೆದರೆ ಮರು ಕಾ ಪರೀಕ್ಷೆ ಮಾಡಲಾಗುವುದು. ಆಗಲೂ ಕ್ರಿಮಿ ಕಂಡು ಬರದಿದ್ದಲ್ಲಿ ಕ್ಷ-ಕಿರಣ ಪರೀಕ್ಷೆಗೊಳಪಡಿಸಲಾಗುತ್ತಿದೆ.
ರೋಗ ಪತ್ತೆಯಾದ ಕೂಡಲೇ ವ್ಯಕ್ತಿಯನ್ನು ಡಾಟ್ಸ್ ಚಿಕಿತ್ಸೆಗೆ ಒಳಪಡಿಸುವುದರಿಂದ ವ್ಯಕ್ತಿಯಲ್ಲಿ ರೋಗ ಉಲ್ಬಣಾವಸ್ಥೆಗೆ ತಿರುಗುವುದನ್ನು ತಪ್ಪಿಸಬಹುದಲ್ಲದೆ, ಇತರರಿಗೆ ಸೋಂಕು ಹರಡದಂತೆ ತಡೆಯಬಹುದು. ಇದುವರೆಗಿನ ಎಲ್ಲ ಚಿಕಿತ್ಸಾ ವಿಧಾನಗಳಿಗೆ ಹೋಲಿಸಿದರೆ "ಡಾಟ್ಸ್' ಚಿಕಿತ್ಸಾ ವಿಧಾನ ಅತ್ಯುತ್ತಮ ವಿಧಾನ ಎನ್ನಿಸಿದೆ.
ಡಾಟ್ಸ್ ಚಿಕಿತ್ಸಾ ಕ್ರಮಗಳು: "ನೇರ ನಿಗಾವಣೆ' ಚಿಕಿತ್ಸಾ ಕ್ರಮದಲ್ಲಿ ಎಲ್ಲ ರೋಗಿಗಳಿಗೂ ಪ್ರತಿದಿನ ನೇರನಿಗಾವಣೆಗಾರರ ಸಮ್ಮುಖದಲ್ಲಿಯೇ ಔಷಧ ಸೇವನೆ ಮೂಲಕ 6ರಿಂದ 8 ತಿಂಗಳ ಕಾಲ ಔಷಧೋಪಚಾರ ನೀಡಲಾಗುತ್ತದೆ. ಪ್ರಸ್ತುತ ಜಿಲ್ಲೆಯಲ್ಲಿ ಕ್ಷಯರೋಗಿಗಳು ನೇರ ನಿಗಾವಣೆಗಾರರ ಮೂಲಕ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಚ್ಐವಿ ಸೋಂಕಿತ ರೋಗಿಗಳಲ್ಲಿ ಕ್ಷಯ ತಗಲುವ ಸಾಧ್ಯತೆ ಇತರರಿಗಿಂತ 5 ಪಟ್ಟು ಹೆಚ್ಚಾಗಿರುತ್ತದೆ. ಎಲ್ಲ ಕ್ಷಯರೋಗಿಗಳು ನೇರನಿಗಾವಣೆ ಚಿಕಿತ್ಸೆಗೆ ಮುನ್ನ ಅಥವಾ ನಂತರ ಆದಷ್ಟು ಬೇಗನೆ ಕಡ್ಡಾಯವಾಗಿ ಎಚ್ಐವಿ ರಕ್ತ ಪರೀಕ್ಷೆಗೆ ಒಳಪಡಬೇಕಾಗುತ್ತದೆ. ಪರೀಕ್ಷೆಯ ನಂತರ ಎಚ್ಐವಿ ಸೋಂಕಿತರಿಗೆ "ಕೋಟ್ರೆೃಮಾಕ್ಸಜೋಲ್' ಮಾತ್ರೆ ಹಾಗೂ ಎಆರ್ಟಿ ಚಿಕಿತ್ಸೆಯ ಲಭ್ಯವಿರುತ್ತದೆ. ಕ್ಷಯರೋಗದಿಂದ ನರಳುತ್ತಿರುವ ಎಚ್ಐವಿ ಸೋಂಕಿತರಿಗೆ ನೇರ ನಿಗಾವಣೆ ಚಿಕಿತ್ಸೆ ನೀಡಿದಲ್ಲಿ ರೋಗದಿಂದ ಗುಣ ಮುಖರಾಗುವ ಜತೆಗೆ ಇವರ ಜೀವಿತಾವಧಿಯೂ ಹೆಚ್ಚಾಗುತ್ತದೆ.
ಶೇ.10 ರೋಗಿಗಳಲ್ಲಿ ಎಚ್ಐವಿ: ಜಿಲ್ಲೆಯಲ್ಲಿ 2008ರಿಂದಲೂ ಟಿಬಿ, ಎಚ್ಐವಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಈ ಕಾರ್ಯಕ್ರಮದಂತೆ ಎಲ್ಲ ಕ್ಷಯ ರೋಗಿಗಳನ್ನು ಎಚ್ಐವಿ ಆಪ್ತ ಸಮಾಲೋಚನೆಗೆ ನಿರ್ದೇಶಿಸಲಾಗುತ್ತಿದೆ. ಟಿಬಿ-, ಎಚ್ಐವಿ ಕಾರ್ಯಕ್ರಮದಡಿ ಪ್ರಸ್ತುತ 2024ರಲ್ಲಿ 2856 ಕ್ಷಯರೋಗಿಗಳಲ್ಲಿ 2829 ರೋಗಿಗಳಿಗೆ ಅಂದರೆ 99ರಷ್ಟು ಎಚ್ಐವಿ ಪರೀಕ್ಷೆಗೊಳಪಡಿಸಲಾಗಿದೆ. ಇದರಿಂದ ಶೇ.10ರಷ್ಟು ಅಂದರೆ 244 ಕ್ಷಯರೋಗಿಗಳು ಎರಡೂ ರೋಗಗಳಿಂದಲೂ ಬಳಲುತ್ತಿರುವುದು ಖಾತರಿಯಾಗಿದೆ. ಪಿಎಂಡಿಟಿ ಕಾರ್ಯಕ್ರಮದಲ್ಲಿ 1780 ಕ್ಷಯರೋಗಿಗಳ ಕಫವನ್ನು ಸಿಬಿಬ್ಯಾಟ್ ಹಾಗೂ ಕಲ್ಚರ್ ಮತ್ತು ಸೆನ್ಸಿಟಿವಿಟಿ ಪರೀಕ್ಷೆಗೆ ಒಳಪಡಿಸಲಾಗಿದ್ದು. ಅದರಲ್ಲಿ 86 ರೋಗಿಗಳು ಡಿಆರ್ಟಿಬಿ(ಡ್ರಗ್ ರೆಸಿಸ್ಟೆಂಟ್ ಟಿಬಿ) ಚಿಕಿತ್ಸೆ ಪ್ರಾರಂಭಿಸಿದ್ದಾರೆ.
ಕ್ಷಯರೋಗವನ್ನು ನಿಮೂರ್ಲನೆಗೊಳಿಸಲು ಸರ್ಕಾರಿ ಸಂಸ್ಥೆಯ ಜತೆಗೆ ಖಾಸಗಿ ವೈದ್ಯರು ಮತ್ತು ಸ್ವಯಂ ಸೇವಾ ಸಂಸ್ಥೆಗಳು ಸಕ್ರಿಯವಾಗಿ ಪಾಲ್ಗೊಂಡು ಶ್ವಾಸಕೋಶದ ಕ್ಷಯ ರೋಗಿಗಳು ಮತ್ತು ಶ್ವಾಸಕೋಶೇತರ ಕ್ಷಯರೋಗಿಗಳಿಗೆ ಉಚಿತವಾಗಿ ದೊರೆಯುವ ಡಾಟ್ಸ್ ಚಿಕಿತ್ಸೆ ಅಳವಡಿಸುವುದರ ಮೂಲಕ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುತ್ತಿದ್ದಾರೆ. ಕಳೆದ ವರ್ಷ ತುಮಕೂರು ಜಿಲ್ಲೆಯ ಖಾಸಗಿ ವೈದ್ಯರು ಕಾ ಪರೀಕ್ಷೆಗೆ ಕಳುಹಿಸಿರುವ ಶಂಕಿತ ರೋಗಿಗಳಲ್ಲಿ 788 ಕ್ಷಯ ರೋಗಿಗಳು ಪತ್ತೆಯಾಗಿದ್ದಾರೆ.| ಡಾ.ಆರ್.ವಿ.ಮೋಹನದಾಸ್, ಜಿಲ್ಲಾ ಕ್ಷಯರೋಗ ನಿಮೂರ್ಲನಾಧಿಕಾರಿ