ಕೃಷಿ ಪತ್ತಿನ ಸಹಕಾರ ಸಂಘಕ್ಕೆ ೫೨.೧೩ ಲಕ್ಷ ನಿವ್ವಳ ಲಾಭ

23 ckm 3
ಚಿಕ್ಕಮಗಳೂರು ಹೊರವಲಯದ ಹಿರೇಮಗಳೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೨೦೨೩-೨೪ನೇ ಸಾಲಿನ ಸರ್ವ ಸದಸ್ಯ ವಾರ್ಷಿಕ ಮಹಾಸಭೆಯನ್ನು ಸಂಘದ ಅಧ್ಯಕ್ಷ ಎಚ್.ಕೆ.ಕೇಶವಮೂರ್ತಿ ಉದ್ಘಾಟಿಸಿದರು. ಎಚ್.ಎಚ್.ಜಗದೀಶ್, ಸಿ.ಎಸ್.ಸತೀಶ್, ನೀಲಶೆಟ್ಟಿ, ಎಂ.ಜಗದೀಶ್, ಗಂಗಮ್ಮ, ಎಚ್.ಎಂ.ಯೋಗೀಶ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಹಿರೇಮಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಶೈಕ್ಷಣಿಕ ಸಾಲಿನಲ್ಲಿ ೫೨.೧೩ ಲಕ್ಷ ರೂ. ನಿವ್ವಳ ಲಾಭ ಗಳಿಸುವ ಮುಖಾಂತರ ನೂತನ ಆಡಳಿತ ಮಂಡಳಿಯೊAದಿಗೆ ಬೆಳವಣಿಗೆಯತ್ತ ಸಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಎಚ್.ಕೆ.ಕೇಶವಮೂರ್ತಿ ತಿಳಿಸಿದರು.

ನಗರದ ಹೊರವಲಯದ ಹಿರೇಮಗಳೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೨೦೨೩-೨೪ನೇ ಸಾಲಿನ ಸರ್ವ ಸದಸ್ಯ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಸ್ತುತ ಸಹಕಾರ ಸಂಘದಿAದ ರೈತಾಪಿ ವರ್ಗಕ್ಕೆ ಸುಮಾರು ೬ ಕೋಟಿ ರೂ. ಸಾಲ ವಿತರಿಸಲಾಗಿದೆ. ೧.೨೦ ಕೋಟಿ ರೂ. ಠೇವಣಿ ಇರಿಸಲಾಗಿದೆ. ಜೊತೆಗೆ ಡಿಸಿಸಿ ಬ್ಯಾಂಕ್‌ನಲ್ಲಿ ೩೩ ಲಕ್ಷ ರೂ. ಷೇರು ಬಂಡವಾಳ ಹೊಂದಿದೆ ಎಂದು ಮಾಹಿತಿ ನೀಡಿದರು.
ಸದಸ್ಯರ ಆರೋಗ್ಯದ ದೃಷ್ಟಿಯಿಂದ ೧,೦೯೦ ಮಂದಿಗೆ ಸಂಘದಿAದ ಯಶಸ್ವಿನಿ ಕಾರ್ಡ್ ಮಾಡಿಸಲಾಗಿದೆ. ಈ ಪೈಕಿ ೯೫೦ ಮಂದಿ ಯಶಸ್ವಿನಿ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆ. ನೂತನ ಆಡಳಿತ ಮಂಡಳಿ ನಿರ್ದೇಶಕರು ಹಾಗೂ ಸಿಬ್ಬಂದಿಗಳ ಸಹಕಾರದಿಂದ ಈ ವರ್ಷ ಅತಿಹೆಚ್ಚು ನಿವ್ವಳ ಲಾಭಗಳಿಸಿ ಯಶಸ್ವಿಯತ್ತ ಮುನ್ನೆಡೆಯುತ್ತಿದೆ ಎಂದರು.
ಹಿರೇಮಗಳೂರು ಗ್ರಾಮದ ಸರ್ವೆ ನಂ.೦೩ ರಲ್ಲಿ ೧೦ ಗುಂಟೆ ಜಾಗವನ್ನು ಸೊಸೈಟಿಗೆ ಹದ್ದುಬಸ್ತಿಗೆ ತೆಗೆದುಕೊಂಡು ಮುಂದೆ ವ್ಯಾಪಾರೀಕರಣಕ್ಕಾಗಿ ಸಭೆಯಲ್ಲಿ ಚರ್ಚಿಸಲಾಗಿದೆ. ಇದು ಹಿಂದಿನ ಪೂರ್ವಜರು ಉಳಿಸಿದಂತ ಆಸ್ತಿಯಾಗಿದ್ದು, ಜಾಗದ ಸಂಬAಧ ಈಚೆಗೆ ನ್ಯಾಯಾಲಯದಲ್ಲಿ ಇತ್ಯರ್ಥಗೊಂಡಿದೆ. ತಾಲೂಕು ಆಡಳಿತ ಹಾಗೂ ಆಯುಕ್ತರು ಡಿಕ್ರಿಗೊಳಿಸಿದ್ದಾರೆ. ಮುಂದೆ ಆ ಜಾಗದಲ್ಲಿ ಕಟ್ಟಡ ನಿರ್ಮಿಸುವ ಉz್ದೆÃಶವಿದೆ ಎಂದು ಹೇಳಿದರು.
ಸಹಕಾರ ಸಂಘದಲ್ಲಿ ಓರ್ವರು ೪೮ ಲಕ್ಷ ರೂ.ಗಳ ಅವ್ಯವಹಾರ ನಡೆಸಿದ್ದು, ಆತನಿಂದ ಹಣವನ್ನು ವಸೂಲಾತಿಗಾಗಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಆ ಹಣ ಸಂಘಕ್ಕೆ ಸಂದಾಯಗೊAಡಲ್ಲಿ ಪಿಗ್ನಿ ಠೇವಣಿ ದಾರರಿಗೆ, ಸ್ವಸಹಾಯ ಸಂಘಗಳಿಗೆ ಸಾಲಸೌಲಭ್ಯ ವಿತರಿಸಬಹುದು ಎಂದು ಹೇಳಿದರು.
೨೦೧೨ರ ಆಡಳಿತ ಮಂಡಳಿ ಸಂಘಕ್ಕೆ ೪೩ ಲಕ್ಷ ರೂ. ತೀರಿಸಲಾಗದೇ ಸಮಸ್ಯೆ ಒಡ್ಡಿತ್ತು. ಇದೀಗ ನೂತನ ಆಡಳಿತ ಮಂಡಳಿ ರಚನೆಗೊಂಡು ನಾಲ್ಕು ವರ್ಷದಲ್ಲೇ ಡಿಸಿಸಿ ಬ್ಯಾಂಕ್ ೪೩ ಲಕ್ಷ ರೂ. ಗಳ ಸಾಲವನ್ನು ಬಡ್ಡಿಸಮೇತ ತೀರಿಸಲಾಗಿದೆ. ಇದಕ್ಕೆ ಶಾಸಕರಾದ ಸಿ.ಟಿ.ರವಿ ಹಾಗೂ ಎಚ್.ಡಿ.ತಮ್ಮಯ್ಯ ಸೇರಿದಂತೆ ಅನೇಕರ ಸಹಕಾರ ಸಾಕಷ್ಟಿದೆ ಎಂದರು.
ಮಾಜಿ ನಗರಸಭೆ ಸದಸ್ಯಎಚ್.ಎಚ್.ಜಗದೀಶ್ ಮಾತನಾಡಿ, ಸಂಘದ ನೂತನ ಅಧ್ಯಕ್ಷ ಕೇಶವ ಮೂರ್ತಿ ನೇತೃತ್ವದಲ್ಲಿ ನಷ್ಟದಲ್ಲಿದ್ದ ಸಹಕಾರ ಸಂಘವನ್ನು ಬೆಳವಣಿಗೆಯತ್ತ ಕೊಂಡೊಯ್ದಿದಿರುವುದು ಹೆಮ್ಮೆ ಯ ಸಂಗತಿ. ಜೊತೆಗೆ ರೈತರಿಗೆ ಹೊಸ ಸಾಲಸೌಲಭ್ಯ ನೀಡುವ ಚಿಂತನೆ ಸಭೆಯಲ್ಲಿ ಕೈಗೊಂಡಿರುವುದು ಉತ್ತಮ ಬೆಳವಣಿಗೆ ಎಂದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಸಿ.ಎಸ್.ಸತೀಶ್, ನೀಲಶೆಟ್ಟಿ, ಎಂ.ಜಗದೀಶ್, ಗಂಗಮ್ಮ, ಎಚ್.ಎಂ.ಯೋಗೀಶ್, ಸಿ.ಎಲ್.ಲೋಕೇಶ್, ಎಚ್.ಸಿ.ಗಂಗಾಧರ್, ಎಂ.ಎನ್.ಮಲ್ಲುAಡಪ್ಪ, ಕೆ.ಆರ್.ಜಯಲಕ್ಷ್ಮೀ, ಮುಖ್ಯ ಕಾರ್ಯನಿರ್ವಹಕ ಡಿ.ಜಿ.ಅಶಿಕ್, ಮಾರಾಟ ಗುಮಾಸ್ತ ಜೆ.ಎಚ್.ಅನಿಲ್, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಪವನ್‌ಕುಮಾರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net