ಗೋಕರ್ಣ ಮಠದಲ್ಲಿ 51ನೇ ವರ್ಷದ ಶಾರದೋತ್ಸವ

Sharade 1
Published on

ಮಂಗಳೂರು: ರಥಬೀದಿ ವೀರಬಾಲಕರ 51ನೇ ವರ್ಷದ ಶಾರದಾ ಮಹೋತ್ಸವ ಗೋಕರ್ಣ ಮಠದಲ್ಲಿ ಸೆ.30ರಿಂದ ಅ.5ರವರೆಗೆ ನಡೆಯಲಿದೆ.


ಶ್ರೀ ಶಾರದೆಯ ವಿಗ್ರಹವನ್ನು ಶುಕ್ರವಾರ ನಗರದ ಟ್ಯಾಂಕ್ ಕಾಲನಿಯಿಂದ ವಿ.ಟಿ ರಸ್ತೆ, ರಥಬೀದಿ, ನಂದಾದೀಪ ರಸ್ತೆ, ಪ್ಲವರ್ ಮಾರ್ಕೆಟ್ ರಸ್ತೆ ಮೂಲಕ ಪ್ರತಿಷ್ಠಾಪನಾ ಸ್ಥಳಕ್ಕೆ ತರಲಾಯಿತು. ಭಾನುವಾರ ಶ್ರೀ ಶಾರದಾ ಪ್ರತಿಷ್ಠಾಪನೆ ನಡೆಯಲಿದೆ. 6 ದಿನ ವಿವಿಧ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ. 5ರಂದು ಶಾರದಾ ವಿಸರ್ಜನೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net