51 ಜನರಿಂದ ರಕ್ತದಾನ

Rotary club
Published on

ಬೀದರ್: ಇಲ್ಲಿಯ ಕೆಇಬಿ ರಸ್ತೆಯ ಮೈ ಡೆಂಟಿಸ್ಟ್ ಕ್ಲಿನಿಕ್ ನಲ್ಲಿ ಗಣರಾಜ್ಯೋತ್ಸವ ನಿಮಿತ್ತ ರೋಟರಿ ಕ್ಲಬ್ ಬೀದರ್ ನ್ಯೂ ಸೆಂಚ್ಯೂರಿ ವತಿಯಿಂದ ಹಮ್ಮಿಕೊಂಡಿದ್ದ ಶಿಬಿರದಲ್ಲಿ 51 ಜನ ರಕ್ತದಾನ ಮಾಡಿದರು. ರೋಟರಿ ಕ್ಲಬ್ ಸದಸ್ಯರು, ಎನ್ ಸಿಸಿ ಕೆಡೆಟ್ಸ್ ಹಾಗೂ ಯುವಕರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿ ಸಾಮಾಜಿಕ ಕಾಳಜಿ ಮೆರೆದರು.

ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ(ಕೆಎಸ್ಐಐಡಿಸಿ) ಅಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ, ರೋಟರಿ ಕ್ಲಬ್ ಬೀದರ್ ನ್ಯೂ ಸೆಂಚ್ಯೂರಿ ನಿರಂತರ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ತುರ್ತು ಅವಶ್ಯಕತೆ ಇರುವವರಿಗೆ ನೆರವಾಗಲು ರಕ್ತದಾನ ಶಿಬಿರ ಸಂಘಟಿಸಿರುವುದು ಶ್ಲಾಘನೀಯ. ಯುವಕರು ಆಸಕ್ತಿಯಿಂದ ರಕ್ತದಾನ ಮಾಡಿ ಇನ್ನೊಬ್ಬರ ಜೀವ ಉಳಿಸುವ ಕೆಲಸ ಮಾಡಬೇಕೆಂದು ಕೋರಿದರು.

ಬಿವಿಬಿ ಕಾಲೇಜಿನ ಎನ್ ಸಿಸಿ ಅಧಿಕಾರಿ ಮೇಜರ್ ಡಾ.ಪಿ. ವಿಠ್ಠಲರೆಡ್ಡಿ, ರೋಟರಿ ಕ್ಲಬ್ ನ್ಯೂ ಸೆಂಚ್ಯೂರಿ ಅಧ್ಯಕ್ಷ ಸೂರ್ಯಕಾಂತ ರಾಮಶೆಟ್ಟಿ ಮಾತನಾಡಿದರು. ಬ್ರಿಮ್ಸ್ ಪ್ರಾಚಾರ್ಯ ಡಾ. ರಾಜೇಶ ಪಾರಾ, ರೋಟರಿ ಕಲ್ಯಾಣ ಝೋನ್ ನಿಯೋಜಿತ ಸಹಾಯಕ ಗವರ್ನರ್ ಶಿವಕುಮಾರ ಯಲಾಲ್, ಕರ್ನಾಟಕ ಕಾಲೇಜು ಎನ್ ಸಿಸಿ ಅಧಿಕಾರಿ ಅಶ್ವಿನ್ ಚವ್ಹಾಣ್, ನಿತಿನ್ ಕರ್ಪೂರ್, ಡಾ.ಕಪಿಲ್ ಪಾಟೀಲ್, ಡಾ.ರಿತೇಶ್ ಸುಲೆಗಾಂವ, ಶಿವಕುಮಾರ ಪಾಕಲ್, ಸತೀಶ ಸ್ವಾಮಿ, ರಿಷಿಕೇಶ ಪಾಟೀಲ್, ರಾಜಕುಮಾರ ಅಳ್ಳೆ, ಭದ್ರಪ್ಪ ಮಿರಕಲ್, ಸಚ್ಚಿದಾನಂದ ಸ್ವಾಮಿ ಇತರರಿದ್ದರು. ನಿತೇಶಕುಮಾರ ಬಿರಾದಾರ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net