51 ಕೇಂದ್ರಗಳಲ್ಲಿ ಎಫ್‌ಡಿಎ ಪರೀಕ್ಷೆ

2810 KLB 01
Published on

ಕಲಬುರಗಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ರಾಜ್ಯದ ನಾಲ್ಕು ಅಭಿವೃದ್ಧಿ ನಿಗಮಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಕ್ಕೆ ಜಿಲ್ಲೆಯ ೫೧ ಕೇಂದ್ರಗಳಲ್ಲಿ ಶನಿವಾರ ಪರೀಕ್ಷೆ ನಡೆದವು.

ನಗರದಲ್ಲಿ ೩೪, ಜೇವರ್ಗಿಯಲ್ಲಿ ಐದು, ಆಳಂದನಲ್ಲಿ ಐದು, ಅಫಜಲಪುರದಲ್ಲಿ ಮೂರು, ಸೇಡಂನಲ್ಲಿ ೪ ಸೇರಿ ಒಟ್ಟು ೫೧ ಕೇಂದ್ರಗಳಲ್ಲಿ ಪರೀಕ್ಷೆ ನಡೆದವು. ಜಿಲ್ಲೆಯಲ್ಲಿ ಒಟ್ಟು ೨೦,೨೭೨ ಅಭ್ಯರ್ಥಿಗಳು ಪರೀಕ್ಷೆಗೆ ಅರ್ಹರಾಗಿದ್ದರು.

ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ಶನಿವಾರ ಪರೀಕ್ಷೆ ನಡೆದಿದ್ದು, ಸಾಮಾನ್ಯ ಜ್ಞಾನ ಮತ್ತು ಕನ್ನಡ, ಇಂಗ್ಲಿಷ್, ಕಂಪ್ಯೂಟರ್ ವಿಷಯಗಳ ಪತ್ರಿಕೆ ಇದ್ದವು. ಜಿಲ್ಲೆಯ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಬರೆದ ಉತ್ತರ ಪತ್ರಿಕೆಗಳನ್ನು ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಭದ್ರವಾಗಿ ಇಡಲಾಗಿದೆ. ಎಲ್ಲ ಪರೀಕ್ಷಾ ಕೇಂದ್ರಗಳ ಸುತ್ತಲೂ ೧೪೪ ಸೆಕ್ಷನ್ ಜಾರಿ ಮಾಡಲಾಗಿತ್ತು.

ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಯಮಿತ, ಬೆಂಗಳೂರು ಆಹಾರ ನಾಗರಿಕ ಸರಬರಾಜು ನಿಗಮ ನಿಯಮಿತ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಮತ್ತು ಮೈಸೂರು ಸೆಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್‌ನಲ್ಲಿ ಖಾಲಿ ಇರುವ ೭೨೦ ಖಾಲಿ ಹುದ್ದೆಗೆ ಪರೀಕ್ಷೆ ನಡೆದವು. ಭಾನುವಾರ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ಪರೀಕ್ಷೆ ನಡೆಯಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net