ಎಂಆರ್‌ಪಿಎಲ್‌ಗೆ 51 ಕೋಟಿ ರೂ. ಲಾಭ

mng_29 aprl MRPL
Published on

ಮಂಗಳೂರು: ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್) ವಾ.31ಕ್ಕೆ ಕೊನೆಗೊಂಡ 2024-25ನೇ ಸಾಲಿನ ಹಣಕಾಸು ವರ್ಷದಲ್ಲಿ ತೆರಿಗೆ ನಂತರದಲ್ಲಿ 51 ಕೋಟಿ ರೂ. ಲಾಭ ಗಳಿಸಿದೆ.

ಕಂಪೆನಿಯ ನಿರ್ದೇಶಕರ ಮಂಡಳಿ ಸಭೆಯಲ್ಲಿ 202425ನೇ ಸಾಲಿನ 4ನೇ ತ್ರೈವಾಸಿಕ ಹಾಗೂ 202425ನೇ ಹಣಕಾಸು ವರ್ಷದ ಫಲಿತಾಂಶಗಳನ್ನು ಅನುಮೋದಿಸಲಾಯಿತು.

ಕಂಪೆನಿಯ ತೆರಿಗೆ ಪೂರ್ವ ಲಾಭ 202324ನೇ ಸಾಲಿನಲ್ಲಿ 5,521 ಕೋಟಿ ರೂ. ಇದ್ದರೆ, 202425ನೇ ಸಾಲಿನಲ್ಲಿ 113 ಕೋಟಿ ರೂ.ಗೆ ಕುಸಿದಿದೆ. ತೆರಿಗೆ ನಂತರದ ನಿವ್ವಳ ಲಾಭ 202324ರಲ್ಲಿ 3,596 ಕೋಟಿ ರೂ. ಇತ್ತು. 202425ನೇ ಸಾಲಿನಲ್ಲಿ ಕಾರ್ಯಾಚರಣೆಯ ಆದಾಯ 1,09,277 ಕೋಟಿ ರೂ. ಆಗಿದ್ದರೆ, 202324ರಲ್ಲಿ 1,05,223 ಕೋಟಿ ರೂ.ಗಳಷ್ಟಿತ್ತು.

202425ನೇ ಸಾಲಿನ ವಾ.31ಕ್ಕೆ ಅಂತ್ಯವಾಗುವ 4ನೇ ತ್ರೈವಾಸಿಕದಲ್ಲಿ ಎಂಆರ್‌ಪಿಎಲ್‌ಗೆ ತೆರಿಗೆ ನಂತರದ ಲಾಭ 363 ಕೋಟಿ ರೂ. (202324ರ ಇದೇ ಅವಧಿಯಲ್ಲಿ 1,137 ಕೋಟಿ ರೂ.) ಆಗಿದೆ. ಕಾರ್ಯಾಚರಣೆಯ ಮೂಲಕ ಬಂದ ಆದಾಯ 27,601 ಕೋಟಿ ರೂ. ಆಗಿದೆ ಎಂದು ಕಂಪೆನಿಯ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net