ಆರ್​ಪಿಎಫ್​ನಿಂದ 51 ಮಕ್ಕಳ ರಕ್ಷಣೆ

New Rpf
Published on

ಹುಬ್ಬಳ್ಳಿ : ರೈಲ್ವೆ ಆಸ್ತಿ, ಪ್ರಯಾಣಿಕರ ಸುರಕ್ಷತೆ ಕಾಪಾಡುವಲ್ಲಿ ನಿರತವಾಗಿರುವ ರೈಲ್ವೆ ರಕ್ಷಣೆ ಪಡೆ (ಆರ್​ಪಿಎಫ್) ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯಲ್ಲಿ ಕಳೆದ ಸೆಪ್ಟೆಂಬರ್​ನಲ್ಲಿ 12 ಜನ ಹೆಣ್ಣು ಮಕ್ಕಳು ಸೇರಿದಂತೆ ಒಟ್ಟು 51 ಮಕ್ಕಳನ್ನು ರಕ್ಷಿಸಿದೆ. ಜತೆಗೆ ಉಪಲಬ್ಧ ಕಾರ್ಯಾಚರಣೆ ಅಡಿ 3.22 ಲಕ್ಷ ರೂ. ಮೌಲ್ಯದ ಟಿಕೆಟ್​ಗಳನ್ನು ವಶಪಡಿಸಿಕೊಂಡಿದೆ.

ರೈಲುಗಳಲ್ಲಿ ನಿಷೇಧಿತ ವಸ್ತುಗಳನ್ನು ಸಾಗಿಸುತ್ತಿದ್ದ 14 ಜನರನ್ನು ಬಂಧಿಸಿ, 86,833 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದೆ. </p><p>ವಿವಿಧ ಕಾರಣಗಳಿಂದ ಮನೆ ಬಿಟ್ಟುಬಂದಿದ್ದ 51 ಮಕ್ಕಳನ್ನು ನನ್ಹೆ ಪರಿಸ್ತೆ ಕಾರ್ಯಾಚರಣೆ ಅಡಿ ರಕ್ಷಿಸಿ, ಎನ್​ಜಿಒ ಹಾಗೂ ಪೊಲೀಸ್ ಇಲಾಖೆಗೆ ಹಸ್ತಾಂತರಿಸಲಾಗಿದೆ.

ಆರೈಕೆ ಮತ್ತು ರಕ್ಷಣೆಯ ಅಗತ್ಯವಿದ್ದ ಒಬ್ಬಳು ಮಹಿಳೆ ಸೇರಿದಂತೆ 6 ವೃದ್ಧರನ್ನು ಡಿಗ್ನಿಟಿ ಕಾರ್ಯಾಚರಣೆ ಅಡಿ ರಕ್ಷಿಸಿ, ಅವರ ಕುಟುಂಬ ಅಥವಾ ಎನ್​ಜಿಒಗಳಿಗೆ ಹಸ್ತಾಂತರಿಸಲಾಗಿದೆ.

ಮಹಿಳಾ ಪ್ರಯಾಣಿಕರ ಶಕ್ತೀಕರಣ-ಮೇರಿ ಸಹೇಲಿ ಅಭಿಯಾನದ ಅಡಿ 32 ರೈಲುಗಳಲ್ಲಿ ಒಂಟಿಯಾಗಿ ಅಥವಾ ಸಂಗಾತಿ ಇಲ್ಲದೇ ಪ್ರಯಾಣಿಸುವ ಮಹಿಳೆಯರ ಸುರಕ್ಷತೆಯ ಖಚಿತಪಡಿಸಲಾಯಿತು.

ವಿವಿಧ ರೈಲುಗಳಲ್ಲಿ 66 ಜನ ಬಿಟ್ಟು ಹೋದ 17.33 ಲಕ್ಷ ರೂ. ಮೌಲ್ಯದ ಲ್ಯಾಪ್​ಟಾಪ್, ಆಭರಣಗಳು ಹಾಗೂ ಇನ್ನಿತರ ಮೌಲ್ಯಯುತ ವಸ್ತುಗಳನ್ನು ಆರ್​ಪಿಎಫ್ ಸಿಬ್ಬಂದಿ ಸಂಬಂಧಿಸಿದ ಪ್ರಯಾಣಿಕರಿಗೆ ಹಸ್ತಾಂತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net