51.50 ಕೋಟಿ ರೂ. ಬಿಡುಗಡೆ

Published on

ಹುಬ್ಬಳ್ಳಿ: ಮರಣ, ವಜಾ, ಸ್ವಯಂ ನಿವೃತ್ತಿ, ವಯೋ ನಿವೃತ್ತಿ ಹೊಂದಿದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೌಕರರಿಗೆ ಉಪಧನ, ಗಳಿಕೆ ರಜಾ ನಗದೀಕರಣದ ವ್ಯತ್ಯಾಸದ ಬಾಕಿ ಮೊತ್ತ ಪಾವತಿಸಲಲು ರಾಜ್ಯ ಸರ್ಕಾರ 51.50 ಕೋಟಿ ರೂ. ಬಿಡುಗಡೆ ಮಾಡಿದೆ.

2020ರ ಜನೆವರಿ 1ರಿಂದ 2023ರ ಫೆಬ್ರುವರಿ 28ರವರೆಗೆ ಮರಣ/ಸ್ವಯಂ ನಿವೃತ್ತಿ/ವಜಾ/ವಯೋ ನಿವೃತ್ತರಾದ ಸಂಸ್ಥೆಯ 2467 ನೌಕರರಿಗೆ ಇದರಿಂದ ಅನುಕೂಲವಾಗಲಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ. ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net