

ವಿಜಯವಾಣಿ ಸುದ್ದಿಜಾಲ ಧಾರವಾಡ
ಬೆಂಗಳೂರಿನ ಕನಕದಾಸರ ಸಾಹಿತ್ಯ ಪ್ರಚಾರ ಸಮಿತಿ, ಕರ್ನಾಟಕ ಕುರುಬ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಮಾ. 9ರಂದು ಮನಸೂರಿನ ರೇವಣಸಿದ್ದೇಶ್ವರ ಮಠದಲ್ಲಿ 50ನೇ ಉಪನ್ಯಾಸ ಸುವರ್ಣ ಸಂಭ್ರಮ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ನಿಂಗಪ್ಪ ಸವಣೂರ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಠದ ಯಾತ್ರಿನಿವಾಸ ಸಭಾಂಗಣದಲ್ಲಿ ಬೆಳ್ಗೆ 10 ಗಂಟೆಗೆ ಎಐಪಿಟಿಎಫ್ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಗುರಿಕಾರ ಕಾರ್ಯಕ್ರಮ ಉದ್ಘಾಟಿಸುವರು. ಬೆಂಗಳೂರಿನ ರಾಮಕೃಷ್ಣ ಯೋಗಾಶ್ರಮದ ಅಧ್ಯಕ್ಷ ಯೋಗೇಶ್ವರಾನಂದ ಸ್ವಾಮೀಜಿ, ಮನಸೂರಿನ ಬಸವರಾಜ ದೇವರು ಸಾನ್ನಿಧ್ಯ ವಹಿಸುವರು. ಮಂಜುನಾಥ ಮಕ್ಕಳಗೇರಿ, ಮಂಜುನಾಥ ಹೊನ್ನಣ್ಣವರ, ರಮೇಶ ಜೋಗಿ ಪಾಲ್ಗೊಳ್ಳುವರು ಎಂದರು.
ಕುಮಾರ ಬೆಕ್ಕೇರಿ ಕನಕದಾಸರ ಸಂಕ್ಷಿಪ್ತ ಪರಿಚಯ ಪುಸ್ತಕ ಬಿಡುಗಡೆ ಮಾಡುವರು. ಸಾಹಿತಿ ವೈ.ಎಂ. ಯಾಕೊಳ್ಳಿ ಅವರು ಕನಕದಾಸರ ಸಾಹಿತ್ಯದ ಅಗತ್ಯತೆ- ಪ್ರಚಾರದ ಸವಾಲಗಳು ಕುರಿತು ಉಪನ್ಯಾಸ ನೀಡುವರು. ಮಧ್ಯಾಹ್ನ 1.30ಕ್ಕೆ ಕವಿಗೋಷ್ಠಿ ನಡೆಯಲಿದೆ. ಮುಖ್ಯ ಶಿಕ್ಷಕಿ ಶಿವಲೀಲಾ ಕಳಸಣ್ಣವರ ಅಧ್ಯಕ್ಷತೆ ವಹಿಸುವರು ಎಂದರು.
ಶಿವು ಖನ್ನೂರ, ಪಿ.ಎಸ್.ಕಲ್ಲೂರ, ಇತರರು ಇದ್ದರು.