ಸಿಂಪಿ ಸಮಾಜದಿಂದ ಶ್ರೀ ಪಾಂಡುರಂಗನ 50ನೇ ದಿಂಡಿ ಮಹೋತ್ಸವ

10 RTL 01
Published on

ರಟ್ಟಿಹಳ್ಳಿ: ಪಟ್ಟಣದ ನಾಮದೇವ ಸಿಂಪಿ ಸಮಾಜದ ವತಿಯಿಂದ ಶ್ರೀ ಪಾಂಡುರಂಗನ 50ನೇ ದಿಂಡಿ ಮಹೋತ್ಸವ ಮತ್ತು ವೈಕುಂಠ ಏಕಾದಶಿ ನಿಮಿತ್ತ ಗುರುವಾರ ಪೋತಿ ಸ್ಥಾಪನೆ, ಭಜನೆ, ಕೀರ್ತನೆ ಶುಕ್ರವಾರ ಬೆಳಗ್ಗೆ ಕಾಕಡಾರತಿ, ಜ್ಞಾನೇಶ್ವರಿ ಅಧ್ಯಯನ ಪಾರಾಯಣ ಮತ್ತು ದೇವರಿಗೆ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು.

ಸ್ಥಳೀಯ ನಾಮದೇವ ಸಿಂಪಿ ಸಮಾಜದ ಮಾಜಿ ಅಧ್ಯಕ್ಷ ರಾಜಕುಮಾರ ಹೇಂದ್ರೆ ಅವರ ಮನೆಯಿಂದ ಪೋತಿ ಸ್ಥಾಪನೆ ಕಾರ್ಯಕ್ರಮ ಪ್ರಾರಂಭವಾಯಿತು. ದಾವಣಗೆರೆ ವ್ಯಾಸಪೀಠದ ಮಂಜುನಾಥ ಪಿ.ಸಿ. ಅವರು ಶ್ರೀ ಜ್ಞಾನೇಶ್ವರಿ 9 ಹಾಗೂ 12ನೇ ಅಧ್ಯಾಯ ಪಾರಾಯಣ ಕಾರ್ಯಕ್ರಮಗಳು, ಪರಸಪ್ಪ ಯಲ್ಲಪ್ಪ ಜೋಗೇರ ಅವರ ನೇತೃತ್ವದಲ್ಲಿ ಭಜನೆ ಮತ್ತು ನಾಮಜಪ ಹೀಗೆ ಹಲವಾರು ಧಾರ್ವಿುಕ ಕಾರ್ಯಕ್ರಮಗಳು ಸಂಭ್ರಮದಿಂದ ಜರುಗಿದವು.

 11ಕ್ಕೆ ದಿಂಡಿ ಮಹೋತ್ಸವ: ಶ್ರೀ ವಿಠ್ಠಲ ರಖುಮಾಯಿ ದೇವರ 50ನೇ ದಿಂಡಿ ಮಹೋತ್ಸವ ಜ. 11ರಂದು ಬೆಳಗ್ಗೆ 8 ಗಂಟೆಗೆ ಜರುಗಲಿದೆ. ಸಮಾಜದ ಅಧ್ಯಕ್ಷ ಜಿ.ಆರ್. ಶಿಗ್ಗಾಂವಕರ, ಎನ್.ಸಿ. ಕಠಾರೆ, ಪರಶುರಾಮ ಹೇಂದ್ರೆ, ರಮೇಶ ಬಾಬಾಜಿಯವರ, ರಾಜಕುಮಾರ ಹೇಂದ್ರೆ, ಚಂದ್ರಶೇಖರ ಬೊಂಗಾಳೆ, ವಿಠ್ಠಲ ನಾಮದೇವ, ಗಣೇಶ ಉರಣಕರ, ಜ್ಞಾನೇಶ್ವರ ಬೊಂಗಾಲೆ, ರಾಜ ಧಾವಸ್ಕರ, ಮಾಲತೇಶ ಮಹೇಂದ್ರಕರ, ದಯಾನಂದ ಒಂಟಿಕರ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net