501 ಗಣೇಶನ ಮೂರ್ತಿ ವಿತರಣೆ

19M.D.R.2
Published on

ಮದ್ದೂರು : ತಾಲೂಕಿನ 250 ಹಳ್ಳಿಗಳಿಗೆ 501 ಗಣೇಶನ ಮೂರ್ತಿಗಳನ್ನು ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಉಚಿತವಾಗಿ ವಿತರಣೆ ಮಾಡಲಾಗಿದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ತಾಲೂಕಿನ ಸೋಮನಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿ ಸೋಮವಾರ ಗಣೇಶನ ಮೂರ್ತಿಗಳಿಗೆ ಪತ್ನಿ ವಿನುತಾ ಕೆ.ಎಂ.ಉದಯ್ ಅವರೊಂದಿಗೆ ವಿಶೇಷ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ನಿರಂತರವಾಗಿ 2ನೇ ವರ್ಷ ಗಣೇಶನ ಮೂರ್ತಿಗಳನ್ನು ಉಚಿತವಾಗಿ ನೀಡುವ ಮೂಲಕ ಹಬ್ಬವನ್ನು ಪ್ರೋತ್ಸಾಹಿಸಲಾಗುತ್ತಿದೆ. ಪ್ರತಿಯೊಬ್ಬರೂ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡಲಿ ಎಂದು ತಾಲೂಕಿನ ಪ್ರತಿ ಗ್ರಾಮಕ್ಕೆ 5 ಅಡಿ ಎತ್ತರದ 2 ಗಣೇಶನ ಮೂರ್ತಿ ವಿತರಣೆ ಮಾಡಲಾಗುತ್ತಿದೆ ಎಂದರು.
ಸಮಾಜ ಸೇವಕರಾದ ವಿನುತಾಕೆ.ಎಂ.ಉದಯ್, ಗ್ರಾಪಂ ಅಧ್ಯಕ್ಷ ತಿಮ್ಮೇಗೌಡ, ಮುಖಂಡರಾದ ಹರೀಶ್, ಹೊಂಬಾಳಯ್ಯ, ದಿನೇಶ್, ಕೆ.ಎಂ.ರವಿಕುಮಾರ್, ಯತೀಶ್, ಶರತ್, ಸತೀಶ್, ಯರಗನಹಳ್ಳಿ ಹರೀಶ್, ಲಿಂಗೇಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net