500 ರೂ. ನಿಂದ 30 ಕೋಟಿ ರೂ. ವಹಿವಾಟು

500 Rs. 30 crore from Rs. transaction
ಗೊಳಸಂಗಿಯಲ್ಲಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂದ 77ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಡಿಸಿಸಿ ಬ್ಯಾಂಕ್​ ನಿರ್ದೇಶಕ ಶೇಖರ ದಳವಾಯಿ ಮಾತನಾಡಿದರು. ಮಹಿಬೂಬ ಹತ್ತರಕಿಹಾಳ, ಕುಮಾರಗೌಡ ಪಾಟೀಲ, ಚನ್ನಮಲ್ಲ ಉಳ್ಳಿ ಇತರರಿದ್ದರು.
Published on

ಗೊಳಸಂಗಿ: 1947ರಲ್ಲಿ ಕೇವಲ 500 ರೂ. ಷೇರು ಬಂಡವಾಳದೊಂದಿಗೆ ಆರಂಭಗೊಂಡಿರುವ ನಮ್ಮ ಸಂ ಸದ್ಯ ವಾರ್ಷಿಕ 30 ಕೋಟಿ ರೂ. ವಹಿವಾಟು ಹೊಂದಿ ವಿಜಯಪುರ ಜಿಲ್ಲೆಯ ಸಹಕಾರಿ ೇತ್ರದಲ್ಲೇ ಅಗ್ರಗಣ್ಯ ಸ್ಥಾನ ತಲುಪಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಡಿಸಿಸಿ ಬ್ಯಾಂಕ್​ ಮತ್ತು ವಿಪಿಜಿಕೆಎಸ್​ ನಿರ್ದೇಶಕ ಶೇಖರ ದಳವಾಯಿ ಸಂತಸ ವ್ಯಕ್ತಪಡಿಸಿದರು.

ಗ್ರಾಮದ ವಿಠ್ಠಲ&ರುಕ್ಮಿಣಿ ಮಂದಿರದಲ್ಲಿ ಗುರುವಾರ ನಡೆದ ಸ್ಥಳಿಯ ವಿವಿಧೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂ (ವಿಪಿಜಿಕೆಎಸ್​) ದ 77ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಅವರು ಮಾತನಾಡಿದರು.

6 ಎಕರೆ ಜಮೀನು ಹೊಂದಿದ ರೈತರಿಗೆ ಸಾಲ ಸರಳೀಕರಣದ ಜೊತೆಗೆ ಶೂನ್ಯ ಬಡ್ಡಿ ದರದಲ್ಲಿ ನೀಡಲಾಗುತ್ತಿದ್ದ 3 ಲ ರೂ. ಸಾಲವನ್ನು ಇನ್ನು ಮುಂದೆ 5 ಲ ರೂ. ಗಳಿಗೆ ಮತ್ತು ವಿವಿಧ ಯೋಜನೆಯಡಿ ಶೇ.3 ರೂ. ಬಡ್ಡಿ ದರದಲ್ಲಿ ನೀಡಲಾಗುತ್ತಿದ್ದ 3 ಲ ರೂ. ಸಾಲವನ್ನು 15 ಲ ರೂ. ಗಳಿಗೆ ಏರಿಕೆ ಮಾಡಲಾಗುವುದು ಎಂದರು.

ಸಂದ ಅಧ್ಯ ಮಹಿಬೂಬ ಹತ್ತರಕಿಹಾಳ ವಾರ್ಷಿಕ ವರದಿ ಓದಿ, ಪ್ರಸ್ತುತ ವರ್ಷ ನಮ್ಮ ಸಂ 55.65 ಲ ರೂ. ಲಾಭ ಗಳಿಸಿದೆ ಎಂದರು.

ಸಭೆಯಲ್ಲಿ ಹಾಜರಿದ್ದ ರೈತರು ಮಾತನಾಡಿ, ಕಟಬಾಕಿ ಸಾಲ ಮರುಪಾವತಿ, ರೈತರ ಕಲ್ಯಾಣ ನಿಧಿಯನ್ನು ಕಡಿತಗೊಳಿಸಿ ಡಿವಿಡೆಂಡ್​ ಮೊತ್ತ, ಮರಣೋತ್ತರ ಪರಿಹಾರ ಹೆಚ್ಚಿಸಬೇಕು. ಹಾಲಿನ ಡೇರಿ ಪುನಾರಂಭಗೊಳಿಸಿ ಸಾಲ ನೀಡಬೇಕು. ರೈತರಿಗೆ ಅಗತ್ಯವಿರುವ ಗೊಬ್ಬರ ಮಾತ್ರ ಶೇಖರಿಸಿಕೊಳ್ಳಬೇಕು. ಹಿರಿಯ ನಾಗರಿಕರ ಠೇವು ಅವಧಿ ಕಡಿತಗೊಳಿಸಬೇಕು ಎಂದರು.

ಕಾರ್ಯನಿರ್ವಹಣಾಧಿಕಾರಿ ರಾವೇಂದ್ರಸ್ವಾಮಿ ದೇವಾಂಗಮಠ ಆಯವ್ಯಯದ ಮಾಹಿತಿ ನೀಡಿದರು. ಉಪಾಧ್ಯ ಕುಮಾರಗೌಡ ಪಾಟೀಲ ಮಾತನಾಡಿದರು.

25 ವರ್ಷಗಳ ಕಾಲ ಕರಣಿಕರಾಗಿ ಸೇವೆ ಸಲ್ಲಿಸಿದ ಶಿವಾನಂದ ಕಮತಗಿ, ಎಸ್​ಎಸ್​ಎಲ್​ಸಿ ಮತ್ತು ಪಿಯುನಲ್ಲಿ ಹೆಚ್ಚು ಅಂಕ ಗಳಿಸಿದ ರೈತರ ಮಕ್ಕಳಾದ ಸಿದ್ದು ಉಪ್ಪಲದಿನ್ನಿ, ಸಂಗಮೇಶ ಪಟ್ಟಣದ, ಪರಶುರಾಮ ಹಡಪದ, ಕಾವೇರಿ ಕಲಾದಗಿ, ಸುಸ್ಮಿತಾ ಬೇನಾಳ ಅವರನ್ನು ಸಂದ ವತಿಯಿಂದ ಸನ್ಮಾನಿಸಲಾಯಿತು.

ಗುರುಲಿಂಗಯ್ಯಸ್ವಾಮಿ ಪಾರ್ವತಿಮಠ, ತಜಮುಲಖಾದ್ರಿಸಾಹೇಬ ಜಾಗೀರದಾರ ಸಾನ್ನಿಧ್ಯ ವಹಿಸಿದ್ದರು. ಸಂದ ನಿರ್ದೇಶಕರಾದ ಶಿವಾನಂದ ಗೋಣಿ, ನಾರಾಯಣ ಕಿರಗತ, ಚನ್ನಮಲ್ಲ ಉಳ್ಳಿ, ವಿರುಪಾಪ್ಪ ಕಿಣಗಿ, ಹನುಮಂತ ಇಟಗಿ, ಶೇಖು ರಾಠೋಡ, ಕಸ್ತೂರೆವ್ವ ತೆಗ್ಗಿ, ಶೋಭಾ ಬೀರಲದಿನ್ನಿ, ಡಿಸಿಸಿ ಬ್ಯಾಂಕ್​ ೇತ್ರಾಧಿಕಾರಿ ಎಚ್​.ಎಸ್​.ದಳವಾಯಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net