

ಬೀದರ್: ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿಯು ನಗರದ ಐ.ಎಂ.ಎ ಹಾಲ್‍ನಲ್ಲಿ ಮೇ 27 ಮತ್ತು 28 ರಂದು ಹಮ್ಮಿಕೊಂಡಿರುವ ಚೆಸ್ ಟೂರ್ನಮೆಂಟ್‍ನಲ್ಲಿ ಪಾಲ್ಗೊಳ್ಳಲು ವಿವಿಧ ಶಾಲೆಗಳ 50 ವಿದ್ಯಾರ್ಥಿಗಳು ಹೆಸರು ನೋಂದಣಿ ಮಾಡಿಸಿದ್ದಾರೆ.
8 ರಿಂದ 12 ವರ್ಷ, 12 ರಿಂದ 15 ವರ್ಷ ಹಾಗೂ 15 ರಿಂದ 18 ವರ್ಷದ ಮೂರು ಪ್ರತ್ಯೇಕ ವಿಭಾಗಗಳಲ್ಲಿ ಟೂರ್ನಮೆಂಟ್ ನಡೆಯಲಿದೆ. ಹೆಸರು ನೋಂದಣಿಗೆ ಮೇ 26 ಕೊನೆಯ ದಿನವಾಗಿದೆ ಎಂದು ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ಅಧ್ಯಕ್ಷ ನಿತಿನ್ ಕರ್ಪೂರ ತಿಳಿಸಿದ್ದಾರೆ.
ಮೂರೂ ವಿಭಾಗಗಳ ವಿಜೇತರಿಗೆ ರೂ. 3 ಸಾವಿರ ಪ್ರಥಮ, ರೂ. 2 ಸಾವಿರ ದ್ವಿತೀಯ ಹಾಗೂ ರೂ. 1 ಸಾವಿರ ತೃತೀಯ ಬಹುಮಾನ ನೀಡಲಾಗುವುದು. ಸಮಗ್ರ ಚಾಂಪಿಯನ್‍ಗೆ ರೂ. 5 ಸಾವಿರ ನಗದು ಹಾಗೂ ಟ್ರೋಫಿ ಕೊಡಲಾಗುವುದು ಎಂದು ಹೇಳಿದ್ದಾರೆ.
ಹೆಸರು ನೋಂದಣಿಗೆ ಮೊಬೈಲ್ ಸಂಖ್ಯೆ 9845621852, 9900728552 ಅಥವಾ 9141277161 ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.