

ಹುಬ್ಬಳ್ಳಿ: ನಿಷೇಧಿತ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಇಲ್ಲಿಯ ಸಿಇಎನ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಗಾರ್ಡನ್‌ಪೇಟ ನಿವಾಸಿ ಅಭಿಷೇಕ (23) ಬಂಧಿತ. ವೃತ್ತಿಯಲ್ಲಿ ಕಾರು ಚಾಲಕ. ಪುಣೆಗೆ ಬಾಡಿಗೆ ಹೋಗಿದ್ದ ವೇಳೆ ಗಾಂಜಾ ಖರೀದಿಸಿ ಹಣ ಗಳಿಸಲು ಮುಂದಾಗಿದ್ದ. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸ್ ಇನ್‌ಸ್ಪೆಕ್ಟರ್ ಬಿ.ಕೆ. ಪಾಟೀಲ ನೇತೃತ್ವದ ತಂಡ ವ್ಯಕ್ತಿಯನ್ನು ಬಂಧಿಸಿದ್ದು, ಬಂಧಿತನಿಂದ 50 ಸಾವಿರ ರೂ. ಮೌಲ್ಯದ 502 ಗ್ರಾಂ ಗಾಂಜಾ, ಸಾವಿರ ರೂ. ನಗದು ಹಾಗೂ ಮೊಬೈಲ್ ಫೋನ್ ಜಪ್ತಿ ಮಾಡಿದೆ.