

ಕುಣಿಗಲ್: ಕೃಷಿ ವಿವಿಗಳಲ್ಲಿ ಪದವಿ ವ್ಯಾಸಂಗ ಮಾಡುವ ರೈತರ ಮಕ್ಕಳಿಗೆ ಈಗಿರುವ ಶೇ.40 ಮೀಸಲಾತಿಯನ್ನು 50ಕ್ಕೆ ಹೆಚ್ಚಿಸುವ ಬಗ್ಗೆ ಸರ್ಕಾರ ಚಿಂತಿಸಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಪಟ್ಟಣದಲ್ಲಿ ಶನಿವಾರ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಹಾಗೂ ಅಮೃತೂರು ರೈತ ಸಂಪರ್ಕ ಕೇಂದ್ರದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, ಕೃಷಿ ಕ್ಷೇತ್ರದಲ್ಲಿ ಸಂಶೋಧನೆಗಳ ಅಗತ್ಯವಿದ್ದು ರೈತ ಮಕ್ಕಳಿಂದ ಈ ಮಹಾತ್ಕಾರ್ಯವಾಗಲಿ ಎಂದರು.
ಕೃಷಿ, ತೋಟಗಾರಿಕೆ, ಪಶುಪಾಲನೆ ಪದವಿಯಲ್ಲಿ ಮೀಸಲಾತಿ ಹೆಚ್ಚಳವಾಗಲಿದ್ದು, ಇದರಲ್ಲಿ ದೊಡ್ಡ ಮತ್ತು ಸಣ್ಣ ರೈತರ ಮಕ್ಕಳು ಎಂದು ಭೇದ ವಾಡದೆ ಎಲ್ಲರಿಗೂ ಸೌಲಭ್ಯ ಸಿಗುವ ವ್ಯವಸ್ಥೆ ಕಲ್ಪಿಸಲು ಸರ್ಕಾರ ಚಿಂತಿಸಿದೆ. ಈ ಬಗ್ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚಿಸಲಾಗುವುದು ಎಂದರು.
ಕಷ್ಟ ಬರುವುದು ಸಾಮಾನ್ಯ. ರೈತರು ಅದನ್ನು ಧೈರ್ಯವಾಗಿ ಹಿಮ್ಮೆಟ್ಟಿಸಿ ನಿಲ್ಲಬೇಕು, ಆತ್ಮಹತ್ಯೆಗೆ ಶರಣಾಗುವುದು ಹೇಡಿತನ, ರೈತರ ಕಣ್ಣೀರೊರೆಸಿ ಜೀವನ ಪಾವನ ವಾಡಿಕೊಳ್ಳಲು ಸಿಎಂಗೆ ಮನವಿ ವಾಡಿ ಕೃಷಿ ಮಂತ್ರಿಯಾಗಿದ್ದೇನೆ. ರೈತರು ಸಮಗ್ರ ಕೃಷಿಗೆ ಒತ್ತು ನೀಡಿ ದೀರ್ ಬೆಳೆಗಿಂತ ಅಲ್ಪಾವಧಿ ವಾಣಿಜ್ಯ ಬೆಳೆಗಳಿಗೆ ಒತ್ತು ನೀಡಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು, ರೈತರಿಗೆ ಅಗತ್ಯವಿರುವ ಎಲ್ಲ ಸೌಲಭ್ಯ ಕೊಡಲು ಸರ್ಕಾರ ಸಿದ್ಧವಿದೆ ಎಂದರು.
ರಾಸಾಯನಿಕ ಗೊಬ್ಬರ ಬಳಸಿ, ಬೆಳೆ ಬೆಳೆದು ಜನರಿಗೆ ವಿಷ ಆಹಾರ ನೀಡಬೇಡಿ ಎಂದು ರೈತರಿಗೆ ಕಿವಿವಾತು ಹೇಳಿದ ಬಿ.ಸಿ.ಪಾಟೀಲ್, ಹೆಚ್ಚಾಗಿ ಸಾವಯವ ಗೊಬ್ಬರ ಬಳಸಿ ಬೆಳೆ ಬೆಳೆದು ನಾಡಿಗೆ ಉತ್ತಮ ಆಹಾರ ನೀಡುವಂತೆ ಮನವಿ ವಾಡಿದರು. ಸಂಸದ ಡಿ.ಕೆ.ಸುರೇಶ್ ವಾತನಾಡಿ, ಕಳೆದ ವರ್ಷ ಖರೀದಿ ಕೇಂದ್ರಕ್ಕೆ ರಾಗಿ ಸರಬರಾಜು ಮಾಡಿರುವ ಹಲವು ರೈತರಿಗೆ ಹಣ ಬಂದಿಲ್ಲ ಈ ಸಂಬಂಧ ಕ್ರಮಕೈಗೊಳ್ಳಬೇಕು, ರಾಗಿ ಖರೀದಿ ಕೇಂದ್ರ ಪ್ರಾರಂಭಿಸಿ ದಲ್ಲಾಳಿಗಳಿಂದ ರೈತರನ್ನು ಪಾರು ವಾಡಬೇಕು ಎಂದು ಆಗ್ರಹಿಸಿದರು.
ಶಾಸಕ ಡಾ.ಎಚ್.ಡಿ.ರಂಗನಾಥ್ ಮಾತನಾಡಿ, ಕೃಷಿ ಕೆಲಸದಲ್ಲಿರುವಾಗ ರೈತರು ಹಾವು ಕಡಿದು ಸತ್ತರೆ ಕೇವಲ 2 ಲಕ್ಷ ರೂಪಾಯಿ ಪರಿಹಾರ ಕೊಡಲಾಗುತ್ತಿದೆ. ಇದನ್ನು 10 ಲಕ್ಷ ರೂಪಾಯಿಗೆ ಏರಿಕೆ ವಾಡಬೇಕು ಎಂದು ಮನವಿ ಮಾಡಿದರು.
ತಹಸೀಲ್ದಾರ್ ವಿ.ಆರ್.ವಿಶ್ವನಾಥ್, ಪುರಸಭಾ ಅಧ್ಯಕ್ಷ ನಾಗೇಂದ್ರ, ಉಪಾಧ್ಯಕ್ಷೆ ಮಂಜುಳಾ, ಜಂಟಿ ಕೃಷಿ ನಿರ್ದೇಶಕಿ ಎಂ.ಎನ್.ರಾಜಸುಲೋಚನ, ರಾಜ್ಯ ಕೃಷಿ ಸವಾಜ ಪ್ರತಿನಿಧಿ ಅನಸೂಯಮ್ಮ, ಕೃಷಿ ಸವಾಜದ ಜಿಲ್ಲಾಧ್ಯಕ್ಷ ಸಿ.ಪಾಪಣ್ಣ, ತಾಲೂಕು ಅಧ್ಯಕ್ಷ ಕೆ.ವಿಶ್ವನಾಥ್ ಇದ್ದರು.
ೆನ್ ಮಾಡಿದರೆ ‘ಜೈ ಕಿಸಾನ್’: ಸಮಸ್ಯೆಗಳ ಬಗ್ಗೆ ೆನ್ ವಾಡಿದರೆ, ಹಲೋ ಅನ್ನುವ ಬದಲಾಗಿ, ಜೈ ಕಿಸಾನ್ ಎಂದು ಹೇಳುವಂತೆ ರಾಜ್ಯದ ಎಲ್ಲ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ, ಈ ಸಂಬಂಧ ಸರ್ಕಾರ ಸುತ್ತೋಲೆ ಹೊರಡಿಸಿದೆ. ಇದರಿಂದ ರೈತರಿಗೆ ನೈತಿಕ ಬೆಂಬಲ ನೀಡಲು ಸಹಕಾರಿಯಾಗಲಿದೆ ಎಂದು ಸಚಿವ ಬಿ.ಸಿ.ಪಾಟೀಲ್ ಹೇಳಿದರು. ಕೃಷಿ ಯಂತ್ರೋಪಕರಣ ಖರೀದಿಯಲ್ಲಿ ತುಮಕೂರು ಜಿಲ್ಲೆಗೆ 4.60 ಕೋಟಿ ರೂ. ಸಹಾಯಧನ ಬಿಡುಗೆಡೆ ವಾಡಿದ್ದು 2.60 ಕೋಟಿ ಖರ್ಚು ವಾಡಲಾಗಿದೆ ಎಂದರು.
ಕೃಷಿ ವೃತ್ತಿಪರ ಕೋರ್ಸ್‌ಗಳಿಗೆ ರಾಜ್ಯದಲ್ಲಿ ಬೇಡಿಕೆ ಹೆಚ್ಚಾಗಿದ್ದು, ಈಗಿರುವ ಕೃಷಿ ಕಾಲೇಜು ಸಾಕಾಗುತ್ತಿಲ್ಲ. ಹಾಗಾಗಿ, ಹೊಸ ಕೃಷಿ ಕಾಲೇಜು ಪ್ರಾರಂಭಿಸಲು ಖಾಸಗಿಯವರಿಗೆ ಅವಕಾಶ ನೀಡಲು ರಾಜ್ಯ ಸಚಿವ ಸಂಪುಟದಲ್ಲಿ ಚರ್ಚಿಸಲಾಗುವುದು, ಬಿ.ಸಿ.ಪಾಟೀಲ್ ಕೃಷಿ ಸಚಿವ