ಕಳ್ಳರ ಪಾಲಾದ 50 ಕ್ವಿಂಟಾಲ್ ಉಳ್ಳಾಗಡ್ಡಿ

onion price hike
Published on

ಮುಂಡರಗಿ: ತಾಲೂಕಿನ ಮೇವುಂಡಿ ಗ್ರಾಮದ ಹೊರವಲಯದ ಜಮೀನಿನಲ್ಲಿ ಕಟಾವು ಮಾಡಿ ಒಣಗಲು ಹಾಕಿದ್ದ ಉಳ್ಳಾಗಡ್ಡಿ ಬೆಳೆಯನ್ನು ದುಷ್ಕರ್ಮಿಗಳು ಕಳವು ಮಾಡಿದ್ದಾರೆ. ರೈತ ಹುಚ್ಚೀರಪ್ಪ ಅವರು ತಮ್ಮ 1.5 ಎಕರೆ ಜಮೀನಿನಲ್ಲಿ ಉಳ್ಳಾಗಡ್ಡಿ ಹಾಗೂ ಮೆಣಸಿನಕಾಯಿ ಬೆಳೆ ಬೆಳೆದಿದ್ದರು.

ದೀಪಾವಳಿ ಮುನ್ನಾದಿನ ಉಳ್ಳಾಗಡ್ಡಿ ಬೆಳೆ ಕಟಾವು ಮಾಡುವುದಕ್ಕಾಗಿ ಜಮೀನಿನಲ್ಲಿ ಕಿತ್ತು ಹಾಕಿದ್ದರು. ಹಬ್ಬದ ಬಳಿಕ ಉಳ್ಳಾಗಡ್ಡಿ ಮಾರಾಟದ ಯೋಚನೆ ಹೊಂದಿದ್ದರು. ಹಬ್ಬದ ಮರುದಿನ ಜಮೀನಿಗೆ ಹೋಗಿ ನೋಡಿದಾಗ ಉಳ್ಳಾಗಡ್ಡಿ ಬೆಳೆಯೆಲ್ಲ ಕಳವಾಗಿತ್ತು. ಇದರಿಂದ ಬೇಸರಗೊಂಡ ಹುಚ್ಚಿರಪ್ಪ ಮುಂದೇನು ಎಂಬ ಚಿಂತೆಯಲ್ಲಿ ಶುಕ್ರವಾರ ಪಟ್ಟಣದ ಪೊಲೀಸ್ ಠಾಣೆಗೆ ತೆರಳಿ ಪೊಲೀಸರಿಗೆ ದೂರು ನೀಡಿದ್ದಾನೆ.

ಅಂದಾಜು 50 ಕ್ವಿಂಟಾಲ್ ಉಳ್ಳಾಗಡ್ಡಿ ಕೈಸೇರುವ ನಿರೀಕ್ಷೆ ಇತ್ತು. ಆದರೆ, ಉಳ್ಳಾಗಡ್ಡಿಯನ್ನು ದುಷ್ಕರ್ಮಿಗಳು ಕಳವು ಮಾಡಿದ್ದಾರೆ ಎಂದು ರೈತ ಹುಚ್ಚೀರಪ್ಪ ಮಣ್ಣೂರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net