ಕಿಲ್ಲಾರಹಟ್ಟಿ ತಾಂಡಾದಲ್ಲಿ 50 ಜನರಿಗೆ ಜ್ವರ

tvg-1
ತಾವರಗೇರಾ ಸಮೀಪದ ಕಿಲ್ಲಾರಹಟ್ಟಿ ತಾಂಡಾದಲ್ಲಿ 50 ಜನರಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ವೈದ್ಯಾಧಿಕಾರಿ ಆನಂದ ಗೋಟೂರ ಹಾಗೂ ಡಾ. ಜಗನ್ನಾಥ ಭೇಟಿನೀಡಿ ಪರಿಶೀಲಿಸಿದರು.
Published on

ತಾವರಗೇರಾ: ಸಮೀಪದ ಕಿಲ್ಲಾರಹಟ್ಟಿ ತಾಂಡಾದ 50 ಜನರಿಗೆ ಜ್ವರ ಕಾಣಿಸಿಕೊಂಡಿದ್ದು, ಜಿಲ್ಲಾಸ್ಪತ್ರೆಯಲ್ಲಿ ಅವರ ರಕ್ತ ಪರೀಕ್ಷಿಸಿದಾಗ ಒಬ್ಬರಿಗೆ ಡೆಂಗೆ ಇರುವುದು ದೃಢಪಟ್ಟಿದೆ.

ಸದ್ಯ ತಾಂಡಾದಲ್ಲಿ ಜ್ವರ ಹತೋಟಿಗೆ ಬಂದಿದೆ. ಕಳೆದೆರಡು ದಿನಗಳಿಂದ ಹೊಸ ಪ್ರಕರಣ ಬೆಳಕಿಗೆ ಬಂದಿಲ್ಲ. ಜ್ವರ ಪೀಡಿತರಿಗೆ ಮಾತ್ರೆ ನೀಡಲಾಗುತ್ತಿದೆ.

ಇಲ್ಲಿ ತಾತ್ಕಾಲಿಕವಾಗಿ ಆಸ್ಪತ್ರೆ ಸ್ಥಾಪಿಸಿದ್ದು, ಆಂಬ್ಯುಲೆನ್ಸ್ ಕೂಡ ಇದೆ. ಮುದೇನೂರು ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಜಿ.ಸಿ.ಪಾಟೀಲ, ಕೆಲ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಇದ್ದಾರೆ.

ತಾಂಡಾದಲ್ಲಿ ವಾರಕ್ಕೆರಡು ಸಲ ಫಾಗಿಂಗ್ ಮಾಡಲಾಗುತ್ತಿದೆ. ತಗ್ಗು ಪ್ರದೇಶದಲ್ಲಿ ನೀರು ನಿಲ್ಲದಂತೆ ವ್ಯವಸ್ಥೆ ಮಾಡಲಾಗಿದೆ. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಸಂಪೂರ್ಣ ಗುಣಮುಖ ಆಗುವವರೆಗೆ ತಾತ್ಕಾಲಿಕ ಆಸ್ಪತ್ರೆ ಇರುತ್ತದೆ ಎಂದು ತಾಲೂಕು ಆಡಳಿತ ವೈದ್ಯಾಧಿಕಾರಿ ಆನಂದ ಗೋಟೂರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net