

ವಿಜಯವಾಣಿ ಸುದ್ದಿಜಾಲ ಮುದ್ದೇಬಿಹಾಳ: ಪಟ್ಟಣದ ದಿ ಕರ್ನಾಟಕ ಕೋ&ಆಪರೇಟಿವ್ ಬ್ಯಾಂಕ್ನ ಆಡಳಿತ ಮಂಡಳಿ ನಿರ್ದೇಶಕರ 13 ಸ್ಥಾನಗಳಿಗೆ ನಡೆಯಲಿರುವ ಚುನಾವಣೆೆಯಲ್ಲಿ ಸ್ಪರ್ಧೆಬಯಸಿ 61 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಅದರಲ್ಲಿ 50 ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಚುನಾವಣಾಧಿಕಾರಿ ವಿಜಯಕುಮಾರ ಉತ್ನಾಳ ತಿಳಿಸಿದ್ದಾರೆ.
ಶುಕ್ರವಾರ ಸಂಜೆ ನಾಮಪತ್ರಗಳ ಪರಿಶೀಲನೆಯ ನಂತರ ಮಾಹಿತಿ ನೀಡಿರುವ ಅವರು, 61 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಪರಿಶೀಲಿಸಿ 11 ನಾಮಪತ್ರಗಳನ್ನು ತಿರಸತಗೊಳಿಸಲಾಯಿತು ಎಂದು ಅವರು ಮಾಹಿತಿ ನೀಡಿದ್ದಾರೆ.
ಸಹಾಯಕ ಚುನಾವಣಾ-ಕಾರಿ ಶಿವಾನಂದ ಕೂಡಗಿ, ಬ್ಯಾಂಕ್ನ ಪ್ರಧಾನ ವ್ಯವಸ್ಥಾಪಕ ಮಲ್ಲಿಕಾರ್ಜುನ ಬಿದರಕುಂದಿ, ವ್ಯವಸ್ಥಾಪಕಿ ಸುಮಾ ನಾಡಗೌಡ ಇದ್ದರು.