

ಹಾವೇರಿ: ಜಿಲ್ಲಾಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ಸೇರಿ ಇಬ್ಬರು ಸರ್ಕಾರಿ ವೈದ್ಯರು, ಲ್ಯಾಬ್ ಟೆಕ್ನಿಷಿಶಿಯನ್, ಗ್ರೂಪ್ ಡಿ ನೌಕರ, ಗ್ರಾಮ ಲೆಕ್ಕಾಧಿಕಾರಿ ಸೇರಿ 50 ಜನರಲ್ಲಿ ಬುಧವಾರ ಸೋಂಕು ದೃಢಪಟ್ಟಿದೆ. ನಾಲ್ವರು ವೃದ್ಧರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ತಿಳಿಸಿದ್ದಾರೆ.
ಒಟ್ಟು ಸೋಂಕಿತರ ಸಂಖ್ಯೆ 584ಕ್ಕೇರಿದ್ದು, 218 ಪ್ರಕರಣಗಳು ಸಕ್ರಿಯವಾಗಿವೆ. ಈವರೆಗೆ 347 ಜನರು ಗುಣವಾಗಿ ಬಿಡುಗಡೆಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಹಾವೇರಿ ತಾಲೂಕು: ಬಸವೇಶ್ವರ ನಗರದ ಸಿ ಬ್ಲಾಕ್ನ ನಿವಾಸಿ 63 ವರ್ಷದ ವೃದ್ಧ, ಎ ಬ್ಲಾಕ್ 17ನೇ ಕ್ರಾಸ್ನ 40 ವರ್ಷದ ಪುರುಷ, ವೈಭವಲಕ್ಷ್ಮಿ ಪಾರ್ಕ್ನ 52 ವರ್ಷದ ಮಹಿಳೆ, 75 ವರ್ಷದ ವೃದ್ಧೆ, ದ್ಯಾಮವ್ವನ ಗುಡಿ ಓಣಿಯ 42 ವರ್ಷದ ಪುರುಷ, ಶಿವಲಿಂಗೇಶ್ವರ ನಗರದ ನಿವಾಸಿ ಜಿಲ್ಲಾಸ್ಪತ್ರೆಯಲ್ಲಿ ಡಿ ಗ್ರೂಪ್ ನೌಕರನಾಗಿದ್ದ 26 ವರ್ಷದ ಯುವಕ, ನಾಗೇಂದ್ರನಮಟ್ಟಿಯ 20 ವರ್ಷದ ಯುವತಿ, ಜಿಲ್ಲಾಸ್ಪತ್ರೆಯಲ್ಲಿ ಸ್ಥಾನಿಕ ವೈದ್ಯಾಧಿಕಾರಿ 51 ವರ್ಷದ ಪುರುಷ, ಗುತ್ತಲ ನಿವಾಸಿ ಜಿಲ್ಲಾಸ್ಪತ್ರೆಯಲ್ಲಿ ಡಿ ಗ್ರೂಪ್ ನೌಕರ 29 ವರ್ಷದ ಪುರುಷ, ಹಾವನೂರ ಗ್ರಾಮದ 39 ವರ್ಷದ ಪುರುಷ, 60 ವರ್ಷದ ವೃದ್ಧೆ, ಕುಳೇನೂರ ಗ್ರಾಮದ 22 ವರ್ಷದ ಯುವತಿ, ಆಲದಕಟ್ಟಿ ಗ್ರಾಮದ ನಿವಾಸಿ ಸಾಫ್ಟ್ವೇರ್ ಇಂಜಿನಿಯರ್ 28 ವರ್ಷದ ಪುರುಷ, ಕುರುಬಗೊಂಡ ಗ್ರಾಮದ 85 ವರ್ಷದ ವೃದ್ಧ, ದೇವಿಹೊಸೂರಿನ 28 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಹಾನಗಲ್ಲ ತಾಲೂಕು: ಪಟ್ಟಣದ ಕಮತಗೇರಿಯ ನಿವಾಸಿಗಳಾದ 12 ವರ್ಷದ ಬಾಲಕ, 33 ವರ್ಷದ ಮಹಿಳೆ, ತಾಲೂಕು ಬ್ಯಾತನಾಳ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ 25 ವರ್ಷದ ಯುವಕ, ಬೈಚವಳ್ಳಿಯ 68 ವರ್ಷದ ವೃದ್ಧೆ, ಬೆಂಗಳೂರಿನಿಂದ ಹುಲ್ಲತ್ತಿಗೆ ಬಂದಿದ್ದ ಗಾರ್ವೆಂಟ್ ಕೆಲಸಗಾರ 28 ವರ್ಷದ ಪುರುಷ, ಕಾಡಶೆಟ್ಟಿಹಳ್ಳಿಯ 58 ವರ್ಷದ ಪುರುಷ, ಬಿ. ಆರೇಗೊಪ್ಪದ 78 ವರ್ಷದ ವೃದ್ಧ, ಬೈತನಾಳದ 34 ವರ್ಷದ ಪುರುಷ, ಅಕ್ಕಿಆಲೂರಿನ 45 ವರ್ಷದ ಪುರುಷ, ಹಾಗೂ ಶಿರಮಾಪುರದ 27 ವರ್ಷದ ಪುರುಷನಿಗೆ ಸೋಂಕು ತಗುಲಿದೆ.
ರಾಣೆಬೆನ್ನೂರ ತಾಲೂಕು: ರಾಣೆಬೆನ್ನೂರ ನಗರದ ಬಸವನಗುಡಿ ಓಣಿಯ ನಿವಾಸಿ ಚಾಲಕ 28ವರ್ಷದ ಪುರುಷ, ಮೈದೂರ ರಸ್ತೆಯ 27ವರ್ಷದ ಮಹಿಳೆ, ಕಜ್ಜರಿ ಪ್ಲಾಟ್ನ 31ವರ್ಷದ ಪುರುಷ, ಮಾರುತಿ ನಗರದ 20ವರ್ಷದ ಪುರುಷ, 22ವರ್ಷದ ಪುರುಷ, 60ವರ್ಷದ ಪುರುಷ, 31ವರ್ಷದ ಮಹಿಳೆ, ಜಿಲ್ಲಾಸ್ಪತ್ರೆಯಲ್ಲಿ ಅರವಳಿಕೆ ತಜ್ಞೆಯಾಗಿದ್ದ 31ವರ್ಷದ ಮಹಿಳೆ, ನಿಟ್ಟೂರಿನ 16ವರ್ಷದ ಬಾಲಕಿಗೆ ಸೋಂಕು ದೃಢಪಟ್ಟಿದೆ.
ಶಿಗ್ಗಾಂವಿ ತಾಲೂಕು…: ಬಂಕಾಪುರ ಶಾ ಬಜಾರನ ಬಟ್ಟೆ ಅಂಗಡಿ ಕೆಲಸಗಾರ 32 ವರ್ಷದ ಪುರುಷ, ಸಿಂಪಿಗಲ್ಲಿಯ 32 ವರ್ಷದ ಪುರುಷ, 13 ವರ್ಷದ ಬಾಲಕ, ಅಂದಲಗಿಯ 3 ವರ್ಷದ ಬಾಲಕಿ, ಇಬ್ರಾಹಿಂಪುರದ ಹೊಸಪ್ಲಾಟ್ನ 25 ವರ್ಷದ ಮಹಿಳೆ, ಶಿಗ್ಗಾಂವಿ ಮೌಲಾಲಿ ನಗರದ ಟೈಲ್ಸ್ ಕೆಲಸಗಾರ 24 ವರ್ಷದ ಯುವಕ, ಜಯದೇವನಗರದ ಎಂಎನ್ಸಿ ಕಂಪನಿಯ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ 23 ವರ್ಷದ ಯುವಕನಿಗೆ ಸೋಂಕು ದೃಢಪಟ್ಟಿದೆ.
ಹಿರೇಕೆರೂರ ತಾಲೂಕು: ಚಪ್ಪರದಹಳ್ಳಿಯ 49 ವರ್ಷದ ಪುರುಷ, ಮಾಸೂರ ಗ್ರಾಮದ 18 ವರ್ಷದ ಯುವತಿ, 16 ವರ್ಷದ ಬಾಲಕಿ, ಕುಂಚೂರಿನ 14 ವರ್ಷದ ಬಾಲಕಿಗೆ ಸೋಂಕು ದೃಢಪಟ್ಟಿದೆ. ಸವಣೂರ ತಾಲೂಕು ಮಾದಾಪುರ ಗ್ರಾಮದ 62 ವರ್ಷದ ವೃದ್ಧನಿಗೆ ಹಾಗೂ ಬ್ಯಾಡಗಿ ಕಲ್ಲೇದೇವರ ಗ್ರಾಮದ 85 ವರ್ಷದ ವೃದ್ಧನಿಗೆ ಸೋಂಕು ತಗುಲಿದೆ.
ನಾಲ್ವರ ಸಾವು: ಸವಣೂರ ತಾಲೂಕು ಯಲವಿಗಿ ಗ್ರಾಮದ 75 ವರ್ಷದ ವೃದ್ಧ ತೀವ್ರ ಉಸಿರಾಟದ ತೊಂದರೆಯಿಂದ ಜು. 16ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಜು. 19ರಂದು ಸ್ವ್ಯಾಬ್ ಟೆಸ್ಟ್ ಮಾಡಲಾಗಿತ್ತು. ಬುಧವಾರ ಪಾಸಿಟಿವ್ ವರದಿ ಬಂದಿದ್ದು, ಅಷ್ಟರಲ್ಲಿಯೇ ಅವರು ಮೃತಪಟ್ಟಿದ್ದಾರೆ. ಹಿರೇಮುಗದೂರ ಗ್ರಾಮದ 74 ವರ್ಷದ ವೃದ್ಧೆ ಜು. 20ರಂದು ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಿಸುವ ಸಮಯದಲ್ಲಿ ಮಾರ್ಗಮಧ್ಯೆ ಮೃತಪಟ್ಟಿದ್ದರು. ಇವರ ಸ್ವ್ಯಾಬ್ನ್ನು ಟೆಸ್ಟ್ ಕಳಿಸಲಾಗಿತ್ತು. ಬುಧವಾರ ಪಾಸಿಟಿವ್ ವರದಿ ಬಂದಿದೆ. ರಾಣೆಬೆನ್ನೂರ ಮೃತ್ಯುಂಜಯ ನಗರದ 40 ವರ್ಷದ ಮಹಿಳೆ ತೀವ್ರ ಜ್ವರದಿಂದ ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ಜು. 10ರಂದು ದಾಖಲಾಗಿದ್ದರು. ಅಲ್ಲಿಯೇ ಸ್ವ್ಯಾಬ್ ಟೆಸ್ಟ್ ನಡೆಸಲಾಗಿತ್ತು. ಜು. 18ರಂದು ಮೃತಪಟ್ಟಿದ್ದರು. ಹಾವೇರಿ ಪುರದ ಓಣಿಯ 20 ವರ್ಷದ ಮಹಿಳೆ ಅಪಘಾತದಿಂದ ಹುಬ್ಬಳ್ಳಿ ಕಿಮ್ಸ್ಗೆ ಜು. 17ರಂದು ದಾಖಲಾಗಿದ್ದರು. ಶಸ್ತ್ರಚಿಕಿತ್ಸೆಗೂ ಮುನ್ನ ಅವರ ಸ್ವ್ಯಾಬ್ ಟೆಸ್ಟ್ ಮಾಡಲಾಗಿತ್ತು. ಅಷ್ಟರೊಳಗೆ ಅವರು ಮೃತಪಟ್ಟಿದ್ದರು. ಇದೀಗ ಪಾಸಿಟಿವ್ ಬಂದಿದೆ.