ಸೋಮೇಶ್ವರ ದೇವಸ್ಥಾನ ಮಹಾದ್ವಾರ ದುರಸ್ತಿಗೆ 50 ಲಕ್ಷ ರೂ. ಅನುದಾನ

HKP
Published on

ಲಕ್ಷ್ಮೇಶ್ವರ: ಪಟ್ಟಣದ ಇತಿಹಾಸ ಪ್ರಸಿದ್ಧ ಸೋಮೇಶ್ವರ ದೇವಸ್ಥಾನದ ಉತ್ತರ ಪ್ರವೇಶ ದ್ವಾರದ ದುರಸ್ತಿಗೆ ಪ್ರವಾಸೋದ್ಯಮ ಇಲಾಖೆಯಿಂದ ಐವತ್ತು ಲಕ್ಷ ರೂಪಾಯಿ ಬಿಡುಗಡೆ ಮಾಡಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಪುರಸಭೆಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷೆ ಯಲ್ಲವ್ವ ದುರ್ಗಣ್ಣವರ, ಉಪಾಧ್ಯಕ್ಷ ಫಿದೋಸ್ ಆಡೂರ ಅವರನ್ನು ಪಟ್ಟಣದಲ್ಲಿ ಭಾನುವಾರ ಸನ್ಮಾನಿಸಿ ಮಾತನಾಡಿದರು. ದೇವಸ್ಥಾನದ ಪ್ರವೇಶ ದ್ವಾರ ಶಿಥಿಲಗೊಂಡಿದ್ದರ ಬಗ್ಗೆ ಮಾಹಿತಿ ಇದ್ದು, ಶೀಘ್ರವೇ ಹಣ ಬಿಡುಗಡೆ ಮಾಡಲಾಗುವುದು. ಲಕ್ಷ್ಮೇಶ್ವರದ ಅಭಿವೃದ್ಧಿ ಬಗ್ಗೆ ಕ್ರಿಯಾಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.

ಕುಡಿಯುವ ನೀರು ಸರಬರಾಜಿನ ಪೈಪ್​ಲೈನ್ ಹಳೆಯದಾಗಿದ್ದು, ಹೊಸ ಪೈಪ್​ಲೈನ್ ಅಳವಡಿಸುವ ಕುರಿತು ಕೆಡಿಪಿ ಸಭೆಯಲ್ಲಿ ರ್ಚಚಿಸಲಾಗುವುದು. ಜತೆಗೆ ಕೆಯುಡಬ್ಲು್ಯಎಸ್ ಅಧಿಕಾರಿಗಳೊಂದಿಗೂ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಮಾಜಿ ಶಾಸಕರಾದ ಜಿ.ಎಸ್. ಗಡ್ಡದೇವರಮಠ, ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ, ಸುಜಾತಾ ದೊಡ್ಡಮನಿ, ಗುರುನಾಥ ದಾನಪ್ಪನವರ, ಸತೀಶಗೌಡ ಪಾಟೀಲ, ವಿ.ಜಿ. ಪಡಿಗೇರಿ, ಜಯಕ್ಕ ಕಳ್ಳಿ, ಜಯಕ್ಕ ಅಂದಲಗಿ, ಮಂಜಕ್ಕ ನಂದೆಣ್ಣವರ, ಚೆನ್ನಪ್ಪ ಜಗಲಿ, ಯಲ್ಲಪ್ಪ ಸೂರಣಗಿ, ಜಗದೀಶ ಹುಲಿಗೆಮ್ಮನವರ, ಬಸವರಾಜ ಓದುನವರ, ರಾಜಣ್ಣ ಕುಂಬಿ, ಮಹೇಶ ಹೊಗೆಸೊಪ್ಪಿನ, ನಾಗರಾಜ ಮಡಿವಾಳರ, ಫಕೀರೇಶ ಮ್ಯಾಟಣ್ಣವರ, ಶಿವನಗೌಡ ಪಾಟೀಲ, ಬಾಬಣ್ಣ ಅಳವಂಡಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net