ದಾಸೋಹ ಮಠದ ಸಭಾಭವನ ಅಭಿವೃದ್ಧಿಗೆ 50 ಲಕ್ಷ ರೂ. ಅನುದಾನ

Basavraj Shivannavar
Published on

ಬ್ಯಾಡಗಿ: ಮೂಕಪ್ಪಸ್ವಾಮಿಗಳು ನೆಲೆಸಿದ ಧರ್ಮಕ್ಷೇತ್ರ ದಾಸೋಹಮಠದ ಸಭಾಭವನ ಅಭಿವೃದ್ಧಿಗೆ 50 ಲಕ್ಷ ರೂಪಾಯಿ ಮಂಜೂರಾತಿ ನೀಡುವುದಾಗಿ ಶಾಸಕ ಬಸವರಾಜ ಶಿವಣ್ಣನವರ ಭರವಸೆ ನೀಡಿದರು.

ತಾಲೂಕಿನ ಗುಡ್ಡದಮಲ್ಲಾಪುರ ಷ.ಬ್ರ. ಮೂಕಪ್ಪಸ್ವಾಮಿಗಳ ಸಭಾಭವನದಲ್ಲಿ ಗ್ರಾಮಸ್ಥರು ಶುಕ್ರವಾರ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ವಿಧಾನಸಭೆ ಚುನಾವಣೆಯಲ್ಲಿ ಎರಡು ಬಾರಿ ಗೆಲ್ಲಿಸಿದ ತಾಲೂಕಿನ ಜನರ ಋಣ ತೀರಿಸಲು ರೈತಪರ, ಜನಪರ ಹಾಗೂ ಬಡವರಿಗೆ ಅನುಕೂಲವಾಗುವ ಯೋಜನೆಗಳನ್ನು ತರಲಾಗುವುದು. ಗ್ರಾಮದಲ್ಲಿ ಪಕ್ಷಬೇಧವಿಲ್ಲದೆ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಮಾಜಿ ಶಾಸಕರು ಇಲ್ಲಿಯ ಸಭಾಭವನ ನಿರ್ವಿುಸಲು 50 ಲಕ್ಷ ರೂ. ಮಂಜೂರು ಮಾಡಿಸಿದ್ದರು. ಧರ್ವಧಿಕಾರಿಗಳ ಆಶಯದಂತೆ ಅಡುಗೆ ಕೋಣೆ ಇತ್ಯಾದಿಗಳನ್ನು ಹೆಚ್ಚುವರಿಯಾಗಿ ನಿರ್ವಿುಸಲು ಪ್ರಸ್ತಾವನೆ ಸಲ್ಲಿಸಿದ್ದು, 50 ಲಕ್ಷ ರೂ. ಮಂಜೂರಾತಿ ಮಾಡಿಸುತ್ತೇನೆ. ಗ್ರಾಮದ ಬೇಡಜಂಗಮರು ರುದ್ರಭೂಮಿ, ಮುಸಲ್ಮಾನರು ಖಬರ್ ಸ್ಥಾನಕಾಗಿ ಜಾಗ ಕೇಳಿದ್ದಾರೆ. ಜಿಲ್ಲಾಧಿಕಾರಿ ಮೂಲಕ ಖಾಸಗಿ ಭೂಮಿ ಖರೀದಿಸಲು ಯತ್ನಿಸಲಾಗುವುದು. ಪ್ರಾಥಮಿಕ ಶಾಲೆಗೆ ಸ್ಮಾರ್ಟ್ ಕ್ಲಾಸ್, ಮಾತಂಗೇಶ್ವರಿ ದೇವಸ್ಥಾನಗಳ ಅಭಿವೃದ್ಧಿಗೆ ಅನುದಾನದ ಬೇಡಿಕೆ ಬಂದಿದ್ದು, ಪರಿಶೀಲಿಸಿ ಹಂತಹಂತವಾಗಿ ಮಂಜೂರು ಮಾಡಲಾಗುವುದು ಎಂದರು.

ಬ್ಯಾಡಗಿ ಅಂಜುಮನ್ ಕಮಿಟಿ ಅಧ್ಯಕ್ಷ ಡಾ. ಎ.ಎಂ. ಸೌದಾಗರ ಮಾತನಾಡಿ, ಜಿಲ್ಲೆಯಲ್ಲಿ ಭಾವೈಕ್ಯದ ಮಠವಾಗಿರುವ ಮೂಕಪ್ಪಸ್ವಾಮಿಗಳ ಕ್ಷೇತ್ರದಲ್ಲಿ ಹಿಂದು, ಮುಸಲ್ಮಾನರು ಒಂದಾಗಿ ಸಾಮರಸ್ಯದ ಬದುಕು ನಡೆಸುತ್ತಿರುವುದು ವಿಶೇಷ. ಗ್ರಾಮದಲ್ಲಿ ಹಬ್ಬ, ಹರಿದಿನಗಳು, ಉರುಸು, ಜಾತ್ರೆಗಳಲ್ಲಿ ಎಲ್ಲ ಸಮುದಾಯಗಳ ಜನರು ಅಣ್ಣ-ತಮ್ಮಂದಿರರಂತೆ ಪ್ರೀತಿ-ವಿಶ್ವಾಸಗಳಿಂದ ಭಾಗವಹಿಸುತ್ತಾರೆ ಎಂದರು.

ಮಠದ ಧರ್ಮಾಧಿಕಾರಿ ವೇ.ಮೂ. ಹುಚ್ಚಯ್ಯಸ್ವಾಮಿ ದಾಸೋಹಮಠ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ವಕೀಲ ವಿ.ಜಿ. ಯಳಗೇರಿ, ಪ್ರಭುಗೌಡ್ರ ಪಾಟೀಲ, ಮಹೇಶಗೌಡ್ರ ಪಾಟೀಲ, ಜಿ.ಎಚ್. ವೀರನಗೌಡ್ರ, ಸುರೇಶಗೌಡ್ರ ಪಾಟೀಲ, ಮಂಜನಗೌಡ್ರ ಲಿಂಗನಗೌಡ್ರ, ಗ್ರಾಪಂ ಸದಸ್ಯ ಕುಬೇರಪ್ಪ ನೆಲ್ಲಿಕೊಪ್ಪದ, ಮಾಲತೇಶ ಶಿಡ್ರಳ್ಳಿ, ಸುಮಿತ್ರವ್ವ ನವಲಿ, ಹುಚ್ಚಯ್ಯ ಹಮ್ಮಗಿ, ಬಸವಂತಪ್ಪ ಅಜ್ಜಪ್ಪಳಿ, ಮುಖಂಡರಾದ ಮೂಕಪ್ಪ ಮೂಡಿ, ಚನ್ನಬಸಪ್ಪ ಪೂಜಾರ, ನನ್ನೆಸಾಬ್ ಉಪ್ಪುಣಸಿ, ಇಸ್ಮಾಯಿಲ್ ಸೂಡಂಬಿ, ಹುಚ್ಚಯ್ಯ ಎಚ್.ಸಿ, ನಿಸಾರಅಹ್ಮದ್ ಆರೀಕಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net